ನವಿ ಮುಂಬೈ: ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟಿ20 ಟೂರ್ನಿಯ ಫೈನಲ್ ಮೇಲೆ ಕಣ್ಣಿಟ್ಟಿರುವ ಮುಂಬೈ ಇಂಡಿಯನ್ಸ್ ತಂಡ ಶುಕ್ರವಾರ ನಡೆಯಲಿರುವ ‘ಎಲಿಮಿನೇಟರ್’ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು ಎದುರಿಸಲಿದೆ.
ಗೆಲ್ಲುವ ತಂಡ ಫೈನಲ್ ಪ್ರವೇಶಿಸಲಿರುವುದರಿಂದ ಈ ಪಂದ್ಯ ಸೆಮಿಫೈನಲ್ ಎನಿಸಿಕೊಂಡಿದೆ. ಮಾರ್ಚ್ 26 ರಂದು ನಡೆಯಲಿರುವ ಫೈನಲ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ನೇರ ಅರ್ಹತೆ ಪಡೆದುಕೊಂಡಿತ್ತು. ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದ ಕಾರಣ ಮುಂಬೈ ತಂಡ ನೇರ ಅರ್ಹತೆಯ ಅವಕಾಶ ಕಳೆದುಕೊಂಡಿತ್ತು.
ಲೀಗ್ ಹಂತದಲ್ಲಿ ಇವೆರಡು ತಂಡಗಳ ನಡುವಣ ಮೊದಲ ಪಂದ್ಯವನ್ನು ಮುಂಬೈ ಜಯಿಸಿದ್ದರೆ, ಎರಡನೇ ಪಂದ್ಯ ಗೆದ್ದು ವಾರಿಯರ್ಸ್ ತಿರುಗೇಟು ನೀಡಿತ್ತು. ಆದ್ದರಿಂದ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಶುಕ್ರವಾರ ತುರುಸಿನ ಪೈಪೋಟಿ ನಡೆಯುವುದು ಖಚಿತ. ಮುಂಬೈ ತಂಡವು ನಾಯಕಿ ಹರ್ಮನ್‌ಪ್ರೀತ್ ಕೌರ್, ಹೆಯಿಲಿ ಮ್ಯಾಥ್ಯೂಸ್, ನಥಾಲಿ ಸಿವೆರ್ ಬ್ರಂಟ್ ಅವರನ್ನು ನೆಚ್ಚಿಕೊಂಡಿದೆ.
ಯುಪಿ ವಾರಿಯರ್ಸ್ ತಂಡದವರು ನಾಯಕಿ ಅಲಿಸಾ ಹೀಲಿ, ತಹಲಿ ಮೆಕ್‌ಗ್ರಾ ಮತ್ತು ಸೋಫಿ ಎಕ್ಸೆಲ್‌ಸ್ಟನ್ ಅವರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸುತ್ತಿದೆ. ಗಾಯದ ಕಾರಣ ಕೊನೆಯ ಲೀಗ್ ಪಂದ್ಯದಲ್ಲಿ ಆಡದೇ ಇದ್ದ ಪ್ರಮುಖ ಆಟಗಾರ್ತಿ ಗ್ರೇಸ್ ಹ್ಯಾರಿಸ್ ಅವರು ಕಣಕ್ಕಿಳಿಯುವ ಸಾಧ್ಯತೆಯಿದೆ.
ಪಂದ್ಯ ಆರಂಭ: ಸಂಜೆ 7.30
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.