ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವದತ್ತ, ಗೌತಮ್ ಪ್ರತಿಭಾನ್ವಿತರು: ರಾಮನ್

Last Updated 17 ಜುಲೈ 2021, 20:37 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ದೇವದತ್ತ ಪಡಿಕ್ಕಲ್ ಮತ್ತು ಕೆ. ಗೌತಮ್ ಅವರಿಬ್ಬರೂ ಪ್ರತಿಭಾವಂತರು ಎನ್ನುವುದರಲ್ಲಿ ಅನುಮಾನವಿಲ್ಲ. ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ತಮಗೆ ಅವಕಾಶ ಸಿಕ್ಕಾಗ ಯಾವ ರೀತಿ ಸಾಮರ್ಥ್ಯ ತೋರುತ್ತಾರೆನ್ನುವುದು ಮುಖ್ಯವಾಗುತ್ತದೆ ಎಂದು ಭಾರತ ತಂಡದ ಮಾಜಿ ಆಟಗಾರ ಡಬ್ಲ್ಯು.ವಿ. ರಾಮನ್ ಹೇಳಿದರು.

‘ಈ ಹಿಂದೆಯೂ ದೇವದತ್ತ ತಮಗೆ ಸಿಕ್ಕ ಅವಕಾಶಗಳಲ್ಲಿ ಮಿಂಚಿದ್ದಾರೆ. ಗೌತಮ್ ಕೂಡ ಐಪಿಎಲ್‌ನಲ್ಲಿ ಉತ್ತಮವಾಗಿ ಆಡಿದ್ದಾರೆ. ಆದರೆ, ಗೌತಮ್ ಅವರು ಆರ್‌ ಅಶ್ವಿನ್ ಅವರನ್ನು ಮೀರಿ ನಿಲ್ಲುವ ಸವಾಲು ಇದೆ. ಇದೊಂದು ಆರೋಗ್ಯಕರ ಸ್ಪರ್ಧೆಯಾಗಿದೆ‘ ಎಂದು ರಾಮನ್ ಹೇಳಿದರು.

‘ಪ್ರಜಾವಾಣಿ‘ಯೊಂದಿಗೆ ಮಾತನಾಡಿದ ಅವರು, ‘ಕೋವಿಡ್ ಪರಿಸ್ಥಿತಿಯು ಇನ್ನೂ ಎಷ್ಟು ಕಾಲ ಕಾಡಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಎರಡು ತಂಡಗಳ ಪರಿಕಲ್ಪನೆಯು ಮುಂದೆಯೂ ಇರಬಹುದು. ಇದೊಂದು ರೀತಿಯಲ್ಲಿ ಒಳ್ಳೆಯದೇ ಬಹಳಷ್ಟು ಜನರಿಗೆ ಅವಕಾಶ ಸಿಗುತ್ತದೆ‘ ಎಂದರು.

‘ಇದು ದೀರ್ಘ ಅವಧಿಯ ಪ್ರವಾಸವಲ್ಲ. ಆದರೂ ಕೋಚ್ ರಾಹುಲ್ ದ್ರಾವಿಡ್ ಅವರು ತಂಡದ ಆಟಗಾರರ ಕೌಶಲಗಳನ್ನು ತಿದ್ದುವ ಮತ್ತು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡಬಲ್ಲರು‘ ಎಂದು ರಾಮನ್ ಹೇಳಿದರು.

‘ಬಯೋಬಬಲ್‌ ವ್ಯವಸ್ಥೆ ಈಗ ಅನಿವಾರ್ಯ. ಅದು ಯಾರ ಕೈಯಲ್ಲಿಯೂ ಇಲ್ಲ. ಆ ವ್ಯವಸ್ಥೆಗೆ ಹೊಂದಿಕೊಂಡು ಆಡುವುದು ರೂಢಿಯಾಗಬೇಕು. ಆಗ ಅದು ಮಾನಸಿಕವಾಗಿ ಒತ್ತಡವೆನಿಸುವುದಿಲ್ಲ‘ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT