ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

IND vs ENG 3rd Test | ಜೈಸ್ವಾಲ್ ದ್ವಿಶತಕ: ಇಂಗ್ಲೆಂಡ್‌ಗೆ 557 ರನ್ ಗುರಿ

Published 18 ಫೆಬ್ರುವರಿ 2024, 8:14 IST
Last Updated 18 ಫೆಬ್ರುವರಿ 2024, 8:14 IST
ಅಕ್ಷರ ಗಾತ್ರ

ರಾಜ್‌ಕೋಟ್‌: ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರ ಎರಡನೇ ದ್ವಿಶತಕ ಹಾಗೂ ಶುಭಮನ್ ಗಿಲ್ ಮತ್ತು ಸರ್ಫರಾಜ್ ಖಾನ್‌ ಅವರ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 430–4 ರನ್‌ ಪೇರಿಸಿ ಇನಿಂಗ್ಸ್ ಡಿಕ್ಲೇರ್‌ ಮಾಡಿದೆ.

ಆ ಮೂಲಕ ಇಂಗ್ಲೆಂಡ್‌ಗೆ ಗೆಲ್ಲಲು 557ರನ್‌ಗಳ ಬೃಹತ್ ಗುರಿ ನೀಡಿದೆ.

ಮೂರನೇ ದಿನದ ಆಟದ ವೇಳೆ ಗಾಯಾಳಾಗಿ ನಿವೃತ್ತಿ ಪಡೆದಿದ್ದ ಜೈಸ್ವಾಲ್, ಇಂದು ಮತ್ತೆ ಕ್ರೀಸ್‌ಗೆ ಆಗಮಿಸಿ ತಮ್ಮ ಶತಕವನ್ನು ದ್ವಿಶತಕವಾಗಿ ಪರಿವರ್ತಿಸಿಕೊಂಡರು. 236 ಎಸೆತಗಳಲ್ಲಿ 214 ರನ್‌ ಗಳಿಸಿದ ಅವರ ಇನಿಂಗ್ಸ್‌ನಲ್ಲಿ 12 ಸಿಕ್ಸರ್ ಹಾಗೂ 14 ಬೌಂಡರಿಗಳಿದ್ದವು.

91ರನ್‌ಗಳಿಸಿ ಗಿಲ್ ಶತಕ ವಂಚಿತರಾದರು. ಎರಡನೇ ಇನಿಂಗ್ಸ್‌ನಲ್ಲೂ ಸರಾಗವಾಗಿ ಬ್ಯಾಟ್ ಬೀಸಿದ ಸರ್ಫರಾಜ್ ಖಾನ್ 72 ಎಸೆತಗಳಲ್ಲಿ 68 ರನ್ ಬಾರಿಸಿದರು.

ತಂಡದ ಮೊತ್ತ 430 ರನ್‌ ಗಳಿಸಿದ್ದಾಗ ನಾಯಕ ರೋಹಿತ್ ಶರ್ಮಾ ಇನಿಂಗ್ಸ್ ಡಿಕ್ಲೇರ್ ಮಾಡಿದರು.

ಇಂಗ್ಲೆಂಡ್ ಪರ ಜೋ ರೋಟ್, ಟಾಮ್ ಹಾರ್ಟ್ಲಿ ಹಾಗೂ ರೆಹಾನ್ ಅಹಮದ್ ತಲಾ ಒಂದು ವಿಕೆಟ್ ಕಿತ್ತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT