ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯ ನ್ಯೂಜೆರ್ಸಿಯಲ್ಲಿ

Published 5 ಫೆಬ್ರುವರಿ 2024, 5:36 IST
Last Updated 5 ಫೆಬ್ರುವರಿ 2024, 5:36 IST
ಅಕ್ಷರ ಗಾತ್ರ

ನ್ಯೂಜೆರ್ಸಿ: 2026 ರ ಫಿಫಾ ವಿಶ್ವಕಪ್ ಫೈನಲ್ ನ್ಯೂಜೆರ್ಸಿಯ ಪೂರ್ವ ರುದರ್‌ಫೋರ್ಡ್‌ನಲ್ಲಿರುವ ಮೆಟ್‌ಲೈಫ್ ಕ್ರೀಡಾಂಗಣ (ನ್ಯೂಯಾರ್ಕ್ ನ್ಯೂಜೆರ್ಸಿ ಕ್ರೀಡಾಂಗಣ) ದಲ್ಲಿ ನಡೆಯಲಿದೆ ಎಂದು ವಿಶ್ವ ಫುಟ್‌ಬಾಲ್‌ ಫೆಡರೇಷನ್‌ (ಫಿಫಾ) ಭಾನುವಾರ ಪ್ರಕಟಿಸಿದೆ.

ಫಿಫಾ ವಿಶ್ವಕಪ್ ಫೈನಲ್ 2026ರ ಜೂನ್‌ 11 ರಿಂದ ಜುಲೈ 19 ರವರೆಗೆ ನಡೆಯಲಿದೆ. ಈ ಬಾರಿ ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೊ ಇದರ ಆತಿಥ್ಯ ವಹಿಸಿವೆ.

ಮೆಕ್ಸಿಕೊದ ಅಜ್ಟೆಕಾ ಕ್ರೀಡಾಂಗಣದಲ್ಲಿ 2026ರ ಜೂನ್ 11ರಂದು ಆರಂಭಿಕ ಪಂದ್ಯ ನಡೆಯಲಿದ್ದು, ಮೆಕ್ಸಿಕೊ ತವರಿನಲ್ಲಿ ಆರಂಭಿಕ ಪಂದ್ಯ ಆಡುತ್ತಿದೆ.

ಇದು ಫಿಫಾ ವಿಶ್ವಕಪ್‌ನ 20 ನೇ ಆವೃತ್ತಿಯಾಗಿದ್ದು, ಈ ಹಿಂದಿಗಿಂತಲೂ ಅತಿದೊಡ್ಡ ಆವೃತ್ತಿಯಾಗಿದೆ. ಈ ಹಿಂದೆ ಇದ್ದ 32 ತಂಡಗಳ ಸಂಖ್ಯೆಯನ್ನು ಈ ಬಾರಿ 48ಕ್ಕೆ ಹೆಚ್ಚಿಸಲಾಗಿದೆ. ಈ ಬಾರಿ ಒಟ್ಟು 104 ಪಂದ್ಯಗಳು ನಡೆಯಲಿವೆ. 

ಲಿಯೋನೆಲ್ ಮೆಸ್ಸಿ ನಾಯಕತ್ವ ಇದ್ದ ಅರ್ಜೆಂಟೀನಾ ತಂಡ ಫಿಫಾ ವಿಶ್ವಕಪ್‌ನ ಹಾಲಿ ಚಾಂಪಿಯನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT