ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಐಎಫ್‌ಎಫ್‌ ಚುನಾವಣೆ: ಭುಟಿಯಾ ನಾಮಪತ್ರ ಸಲ್ಲಿಕೆ

Last Updated 25 ಆಗಸ್ಟ್ 2022, 12:20 IST
ಅಕ್ಷರ ಗಾತ್ರ

ನವದೆಹಲಿ: ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ಒಬ್ಬರಾಗಿರುವ ಭಾರತ ತಂಡದ ಮಾಜಿ ನಾಯಕ ಭೈಚುಂಗ್‌ ಭುಟಿಯಾ ಅವರು ಗುರುವಾರ ಹೊಸದಾಗಿ ನಾಮಪತ್ರ ಸಲ್ಲಿಸಿದರು.

45 ವರ್ಷದ ಭುಟಿಯಾ ಅವರ ಹೆಸರನ್ನು ಆಂಧ್ರ ಫುಟ್‌ಬಾಲ್‌ ಸಂಸ್ಥೆ ಸೂಚಿಸಿದರೆ, ರಾಜಸ್ತಾನ ಫುಟ್‌ಬಾಲ್‌ ಸಂಸ್ಥೆ ಅನುಮೋದಿಸಿತು.

‘ಎಐಎಫ್ಎಫ್‌ ಅಧ್ಯಕ್ಷ ಸ್ಥಾನದ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದೇನೆ. ಆ ಹುದ್ದೆಗೆ ನಾನು ಸೂಕ್ತ ವ್ಯಕ್ತಿ ಎಂಬುದಾಗಿ ಭಾವಿಸಿದ್ದೇನೆ’ ಎಂದು ಭುಟಿಯಾ ಪ್ರತಿಕ್ರಿಯಿಸಿದ್ದಾರೆ. ಎಐಎಫ್‌ಎಫ್‌ ಚುನಾವಣೆ ಸೆ.2 ರಂದು ನಡೆಯಲಿದೆ.

ಭುಟಿಯಾ ಈ ಮೊದಲು ‘ಖ್ಯಾತನಾಮ ಆಟಗಾರ’ನಾಗಿದ್ದುಕೊಂಡು ನಾಮಪತ್ರ ಸಲ್ಲಿಸಿದ್ದರು. ಆದರೆ ಈಚೆಗೆ ತನ್ನ ತೀರ್ಪು ಮಾರ್ಪಾಡು ಮಾಡಿದ್ದ ಸುಪ್ರೀಂ ಕೋರ್ಟ್‌, ಎಐಎಫ್‌ಎಫ್‌ ಮತದಾರರ ಪಟ್ಟಿಯಲ್ಲಿ ’ಖ್ಯಾತನಾಮ ಆಟಗಾರರು‘ ಇರುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಆದ್ದರಿಂದ ಭುಟಿಯಾ ಅವರಿಗೆ ಯಾವುದಾದರೂ ರಾಜ್ಯ ಸಂಸ್ಥೆಯ ಬೆಂಬಲದೊಂದಿಗೆ ಹೊಸದಾಗಿ ನಾಮಪತ್ರ ಸಲ್ಲಿಸುವುದು ಅನಿವಾರ್ಯವಾಗಿತ್ತು.

ಮೋಹನ್‌ ಬಾಗನ್‌ ಮತ್ತು ಈಸ್ಟ್‌ ಬೆಂಗಾಲ್‌ ತಂಡಗಳ ಮಾಜಿ ಗೋಲ್‌ಕೀಪರ್‌ ಕಲ್ಯಾಣ್‌ ಚೌಬೆ ಅವರು ಈಗಾಗಲೇ ನಾಮಪತ್ರ ಸಲ್ಲಿಸಿದ್ದು, ಅಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿ ಎನಿಸಿಕೊಂಡಿದ್ದಾರೆ.

ಬಂಗಾಳದ ಬಿಜೆಪಿ ಮುಖಂಡರೂ ಆಗಿರುವ ಚೌಬೆ ಅವರ ಹೆಸರನ್ನು ಗುಜರಾತ್‌ ಫುಟ್‌ಬಾಲ್‌ ಸಂಸ್ಥೆ ಸೂಚಿಸಿದ್ದರೆ, ಅರುಣಾಚಲ ಪ್ರದೇಶ ಫುಟ್‌ಬಾಲ್‌ ಸಂಸ್ಥೆ ಅನುಮೋದಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT