ಮಂಗಳವಾರ, ಆಗಸ್ಟ್ 16, 2022
30 °C

ಹೈದರಾಬಾದ್ ಸೋಲು ತಪ್ಪಿಸಿದ ಜೊವೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಗಾಂವ್: ಪೆನಾಲ್ಟಿ ಕಾರ್ನರ್‌ ಅನ್ನು ಗೋಲ್‌ನಲ್ಲಿ ಪರಿವರ್ತಿಸಿದ ಜೊವೊ ವಿಕ್ಟರ್ ಹೈದರಾಬಾದ್ ತಂಡದ ಸೋಲು ತಪ್ಪಿಸಿದರು.

ಶುಕ್ರವಾರ ಫತೋರ್ಡಾ ಕ್ರೀಡಾಂಗಣದಲ್ಲಿ ಹೈದರಾಬಾದ್ ಎಫ್‌ಸಿ ಮತ್ತು ಎಟಿಕೆ ಮೋಹನ್ ಬಾಗನ್ ನಡುವಣ ಪಂದ್ಯವು 1–1ರಿಂದ ಡ್ರಾ  ಆಯಿತು.

ಆರಂಭದಿಂದಲೂ ಎರಡೂ ತಂಡಗಳ ಆಟಗಾರರು ತುರುಸಿನ ಪೈಪೋಟಿಯೊಡ್ಡಿದರು. ಮೊದಲರ್ಧದಲ್ಲಿ ಗೋಲು ದಾಖಲಾಗಲಿಲ್ಲ. ಆದರೆ 54ನೇ ನಿಮಿಷದಲ್ಲಿ ಎಟಿಕೆ ತಂಡದ ಮನ್ವೀರ್ ಸಿಂಗ್ ಗೋಲು ಹೊಡೆದರು. ಇದರಿಂದಾಗಿ ತಂಡವು 1–0 ಮುನ್ನಡೆ ಗಳಿಸಿತು.

ಆದರೆ ಈ ಸಂತಸವು ಹತ್ತು ನಿಮಿಷಗಳವರೆಗೆ ಮಾತ್ರ ಉಳಿಯಿತು. 65ನೇ ನಿಮಿಷದಲ್ಲಿ ಜೊವೊ ಕಾಲ್ಚಳಕದಿಂದ ಗೋಲು ದಾಖಲಾಯಿತು. ಉಳಿದ ಅವಧಿಯಲ್ಲಿ ಉಭಯ ತಂಡಗಳ ರಕ್ಷಣಾ  ಆಟಗಾರರು ಬಿಗಿಯಾಗಿ ಆಡಿದ್ದರಿಂದ ಗೋಲು ಹೊಡೆಯುವುದು ಸಾಧ್ಯವಾಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು