ಶುಕ್ರವಾರ, ಫೆಬ್ರವರಿ 26, 2021
20 °C

2023ರ ಫಿಫಾ ಮಹಿಳಾ ವಿಶ್ವಕಪ್‌: ಆಸ್ಟ್ರೇಲಿಯಾ–ನ್ಯೂಜಿಲೆಂಡ್‌ಗೆ ಆತಿಥ್ಯ

ಎಪಿ Updated:

ಅಕ್ಷರ ಗಾತ್ರ : | |

ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ –ಎಎಫ್‌ಪಿ ಚಿತ್ರ

ಜಿನೆವಾ: 2023ರ ಫಿಫಾ ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಆಯೋಜನೆಯಾಗಲಿದೆ.

ವಿಶ್ವಕಪ್‌ ಆತಿಥ್ಯಕ್ಕಾಗಿ ಉಭಯ ರಾಷ್ಟ್ರಗಳು ಜಂಟಿಯಾಗಿ ಬಿಡ್‌ ಸಲ್ಲಿಸಿದ್ದವು.

ಗುರುವಾರ ನಡೆದ ಫಿಫಾ ಕೌನ್ಸಿಲ್‌ನಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಟೂರ್ನಿ ನಡೆಸುವ ನಿರ್ಣಯದ ಪರ 22 ಮತಗಳು ಚಲಾವಣೆಯಾದವು. ಕೊಲಂಬಿಯಾ ಕೂಡ ಬಿಡ್‌ ಸಲ್ಲಿಸಿತ್ತು. ಆ ರಾಷ್ಟ್ರದ ಪರ 13 ಮತಗಳಷ್ಟೇ ಚಲಾವಣೆಗೊಂಡವು.

ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ ಮತ್ತು ಈ ಹಿಂದೆ ಅಮೆರಿಕ ಫುಟ್‌ಬಾಲ್‌ ಫೆಡರೇಷನ್‌ನ ಅಧ್ಯಕ್ಷರಾಗಿದ್ದ ಸುನಿಲ್‌ ಗುಲಾಟಿ ಅವರು ಕಾಂಗರೂ ಮತ್ತು ಕಿವೀಸ್‌ ನಾಡಿನಲ್ಲಿ ಟೂರ್ನಿ ನಡೆಸುವ ಬಗ್ಗೆ ಒಲವು ತೋರಿದರು.

ಮಹಿಳಾ ಫುಟ್‌ಬಾಲ್‌ಗೆ ಉತ್ತೇಜನ ನೀಡುವ ಉದ್ದೇಶದಿಂದ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಒಟ್ಟು 32 ತಂಡಗಳು ಪಾಲ್ಗೊಳ್ಳಲಿರುವ ಮೊದಲ ವಿಶ್ವಕಪ್‌ ಎಂಬ ಹೆಗ್ಗಳಿಕೆ ಈ ಟೂರ್ನಿಯದ್ದಾಗಿದೆ. ಜಂಟಿಯಾಗಿ ಆಯೋಜನೆಯಾಗುತ್ತಿರುವ ಮೊದಲ ಟೂರ್ನಿಯೂ ಇದಾಗಿದೆ.

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ತಂಡಗಳು ವಿಶ್ವ ರ‍್ಯಾಂಕಿಂಗ್‌ನಲ್ಲಿ ಕ್ರಮವಾಗಿ 7 ಮತ್ತು 23ನೇ ಸ್ಥಾನಗಳಲ್ಲಿದ್ದು, ವಿಶ್ವಕಪ್‌ಗೆ ನೇರ ಅರ್ಹತೆ ಗಳಿಸಲಿವೆ.

‘ಮಹಿಳಾ ಫುಟ್‌ಬಾಲ್‌ನ ಬೆಳವಣಿಗೆಗೆ ನಾವೆಲ್ಲಾ ಶ್ರಮಿಸಬೇಕಿದೆ. ಹೀಗಾಗಿ ಇನ್ನು ಮುಂದೆ ನಾಲ್ಕರ ಬದಲು ಪ್ರತಿ ಎರಡು ವರ್ಷಗಳಿಗೊಮ್ಮೆ ವಿಶ್ವಕಪ್‌ ಆಯೋಜಿಸುವಂತೆ ಹಲವರು ಸಲಹೆ ನೀಡಿದ್ದಾರೆ. ಇದನ್ನು ಪರಿಶೀಲಿಸುತ್ತೇವೆ’ ಎಂದು ಇನ್ಫಾಂಟಿನೊ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು