ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯಾಳು ಅಗಸ್ಟೊ ಬದಲು ಬಿಎಫ್‌ಸಿ ಸೇರಿಕೊಂಡ ಜಮೈಕಾ ಆಟಗಾರ ಕೆವಾನ್

Last Updated 13 ಫೆಬ್ರುವರಿ 2020, 10:24 IST
ಅಕ್ಷರ ಗಾತ್ರ

ಬೆಂಗಳೂರು: ಅಮೆರಿಕದ ಯುಎಸ್‌ಎಲ್ ಚಾಂಪಿಯನ್‌ಷಿಪ್‌ನಲ್ಲಿ ನ್ಯೂ ಮೆಕ್ಸಿಕೊ ಯುನೈಟೆಡ್ ತಂಡದ ಪರ ಆಡುತ್ತಿದ್ದ ಹಾಗೂಜಮೈಕಾ ತಂಡದ ಫಾರ್ವರ್ಡ್‌ ಆಟಗಾರಕೆವಾನ್ ಫ್ರೇಟರ್ ಜೊತೆ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ)ಒಪ್ಪಂದ ಮಾಡಿಕೊಂಡಿದೆ.

25 ವರ್ಷದ ಕೆವಾನ್ ಗಾಯಾಳು ರಾಫೀಲ್‌ ಅಗಸ್ಟೊ ಅವರ ಬದಲು ತಂಡ ಕೂಡಿಕೊಂಡಿದ್ದು, ಈ ಬಾರಿಐಎಸ್‌ಎಲ್ ಟೂರ್ನಿ ಮುಗಿಯುವ ವರೆಗೆ ತಂಡದಲ್ಲಿರಲಿದ್ದಾರೆ. ಇದರೊಂದಿಗೆ ಬಿಎಫ್‌ಸಿ ತಂಡ ಸೇರಿದ ಜಮೈಕಾದಎರಡನೇ ಆಟಗಾರ ಎನಿಸಿದ್ದಾರೆ. ಇತ್ತೀಚೆಗೆ ದೆಶಾರ್ನ್‌ ಬ್ರೊನ್ ಬಿಎಫ್‌ಸಿ ಪರ ಒಪ್ಪಂದ ಮಾಡಿಕೊಂಡಿದ್ದರು.

‘ಸಣ್ಣ ಅವಧಿಯಲ್ಲಿಸಾಕಷ್ಟನ್ನು ಸಾಧಿಸಿರುವಬಿಎಫ್‌ಸಿಕ್ಲಬ್‌ನಸದಸ್ಯನಾಗಲು ಅವಕಾಶ ಸಿಕ್ಕಿರುವುದು ಖುಷಿ ನೀಡಿದೆ. ಸಹ ಆಟಗಾರರೊಂದಿಗೆ ಕಣಕ್ಕಿಳಿಯಲು, ಗೋಲು ಬಾರಿಸಲು ಮತ್ತು ತಂಡಕ್ಕೆ ಗೆಲುವು ತಂದುಕೊಡಲು ಕಾತರನಾಗಿದ್ದೇನೆ. ಜೊತೆಗೆಭಾರತೀಯ ಸಂಸ್ಕೃತಿಯ ಸೂಕ್ಷ್ಮತೆಯನ್ನುಆನಂದಿಸಲು ನಾನು ಉತ್ಸುಕನಾಗಿದ್ದೇನೆ’ ಎಂದು ಕೆವಾನ್ ಹೇಳಿದ್ದಾರೆ.

2016ರಲ್ಲಿ ವೃತ್ತಿಪರ ಫುಟ್‌ಬಾಲ್‌ಗೆ ಪದಾರ್ಪಣೆ ಮಾಡಿದ ಕೆವಾನ್‌ ಅವರು ಆರಂಭದಲ್ಲಿಜಮೈಕಾದ ಹಾರ್ಬರ್ ವ್ಯೂ ಎಫ್‌ಸಿ ಪರ ಆಡುತ್ತಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ ಅವರು, ರಿಯಲ್‌ ಮೊನಾರ್ಕ್ಸ್‌, ಹಾರ್ಬರ್‌ ವ್ಯೂವ್‌ ಎಫ್‌ಸಿ, ಕೊಲಾರೊಡೊ ಸ್ಪ್ರಿಂಗ್ಸ್‌, ಸ್ವಿಚ್‌ ಬ್ಯಾಕ್‌ ಎಫ್‌ಸಿ, ಫೋನಿಕ್ಸ್‌ ಎಫ್‌ಸಿ ಮತ್ತು ನ್ಯೂ ಮೆಕ್ಸಿಕೊ ಯುನೈಟೆಡ್‌ಪರ ಆಡಿದ್ದಾರೆ.

ನ್ಯೂ ಮೆಕ್ಸಿಕೊ ಯುನೈಟೆಡ್‌ ಪರ 21 ಪಂದ್ಯಗಳನ್ನು ಆಡಿ 14 ಗೋಲುಗಳನ್ನು ಬಾರಿಸಿದ್ದಾರೆ.ಯುಎಸ್‌ಎಲ್‌ ಮಾತ್ರವಲ್ಲದೆಜಮೈಕನ್ ಪ್ರೀಮಿಯರ್ ಲೀಗ್‌ನಲ್ಲೂ ಆಡಿದ ಅನುಭವ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT