ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಂಡಿಯನ್ ಸೂಪರ್ ಲೀಗ್ | ಈಸ್ಟ್ ಬೆಂಗಾಲ್ ಎದುರು ವಿನೀತ್ ಗೋಲು: ಬಿಎಫ್‌ಸಿ ಶುಭಾರಂಭ

Published : 14 ಸೆಪ್ಟೆಂಬರ್ 2024, 17:41 IST
Last Updated : 14 ಸೆಪ್ಟೆಂಬರ್ 2024, 17:41 IST
ಫಾಲೋ ಮಾಡಿ
Comments

ಬೆಂಗಳೂರು: ವಿನೀತ್ ವೆಂಕಟೇಶ್ ಅವರು ಗಳಿಸಿದ ಏಕೈಕ ಗೋಲಿನ ನೆರವಿನಿಂದ ಬೆಂಗಳೂರು ಫುಟ್‌ಬಾಲ್ ಕ್ಲಬ್‌ ತಂಡವು ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವು 1–0ಯಿಂದ ಈಸ್ಟ್ ಬೆಂಗಾಲ್ ವಿರುದ್ಧ ಗೆದ್ದಿತು. 

ಪಂದ್ಯದಲ್ಲಿ ಆರಂಭದಿಂದಲೂ ಉಭಯ ತಂಡಗಳು ತುರುಸಿನ ಪೈಪೊಟಿ ನಡೆಸಿದವು. 25ನೇ ನಿಮಿಷದಲ್ಲಿ ವಿನಿತ್ ಕಾಲ್ಚಳಕ ಮೆರೆದರು. ಈಸ್ಟ್ ಬೆಂಗಾಲ್ ತಂಡದ ಗೋಲ್‌ಕೀಪರ್ ಪ್ರಭಸುಖನ್‌ ಸಿಂಗ್ ಅವರನ್ನು ವಂಚಿಸಿದ ವಿನಿತ್ ಗೋಲು ಗಳಿಸಿದರು. ಇದರ ನಂತರ ಬಿಎಫ್‌ಸಿ ತಂಡದ ರಕ್ಷಣಾ ಆಟಗಾರರು ಅಮೋಘವಾದ ಆಟವಾಡಿದರು. 

ಈಸ್ಟ್ ಬೆಂಗಾಲ್‌ ತಂಡದ ಸ್ಟ್ರೈಕರ್ಸ್‌ಗಳ ಹಲವು ಪ್ರಯತ್ನಗಳು ವಿಫಲವಾದವು. ಸುನಿಲ್ ಚೆಟ್ರಿ ನಾಯಕತ್ವದ ತಂಡವು ಪಾರಮ್ಯ ಮೆರೆಯಿತು. 

ಚೆನ್ನೈಯಿನ್‌ಗೆ ಜಯ: ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಸಂಜೆ ನಡೆದ ಪಂದ್ಯದಲ್ಲಿ  ಚೆನ್ನೈಯಿನ್ ಎಫ್‌ಸಿ ತಂಡವು 3–2ರಿಂದ ಒಡಿಶಾ ಎಫ್‌ಸಿ ವಿರುದ್ಧ ಜಯಿಸಿತು. 

ಚೆನ್ನೈಯಿನ್ ತಂಡದ ಫರೂಕ್ ಚೌಧರಿ (48ನಿ, 51ನಿ) ಎರಡು ಮತ್ತು ಡೇನಿಯಲ್ ಚಿಮಾ ಚುಕ್ವು (69ನಿ) ಒಂದು ಗೋಲು ಗಳಿಸಿದರು. ಒಡಿಶಾದ ಡಿಯೆಗೊ ಮಾರ್ಸಿಯೊ (9ನಿ) ಪೆನಾಲ್ಟಿಯಲ್ಲಿ ಗೋಲು ಹೊಡೆದರು. ರಾಯಲ್ ಕೃಷ್ಣ (90+5ನಿ) ಗೋಲು ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT