ಗುರುವಾರ , ಮಾರ್ಚ್ 23, 2023
28 °C

ಫುಟ್‌ಬಾಲ್‌: ಬೆಂಗಳೂರು ವಾರಿಯರ್ಸ್‌ಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ಬೆಂಗಳೂರು ವಾರಿಯರ್ಸ್‌ ಎಫ್‌ಸಿ ತಂಡದವರು ಬಿಡಿಎಫ್‌ಎ ‘ಬಿ’ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಗೆಲುವು ಪಡೆದರು.

ಶುಕ್ರವಾರ ನಡೆದ ಪಂದ್ಯದಲ್ಲಿ ವಾರಿಯರ್ಸ್‌ 3–0 ಗೋಲುಗಳಿಂದ ಆರ್‌.ಎಸ್‌ ಸ್ಪೋರ್ಟ್ಸ್‌ ಎಫ್‌ಸಿ ತಂಡವನ್ನು ಮಣಿಸಿತು. ಮೊಹಮ್ಮದ್‌ ರಯಾನ್ (2ನೇ ನಿ.), ಕೆವಿನ್‌ (9ನೇ ನಿ.) ಮತ್ತು ಮೋಹಿತ್ ಸಿಂಗ್ (58 ನೇ ನಿ.) ಅವರು ವಿಜಯಿ ತಂಡದ ಪರ ಗೋಲು ಗಳಿಸಿದರು.

ಸೋಮವಾರ ನಡೆಯಲಿರುವ ‘ಎ’ ಡಿವಿಷನ್‌ ಲೀಗ್ ಪಂದ್ಯಗಳಲ್ಲಿ ಸೌತ್‌ ಯುನೈಟೆಡ್ ಎಫ್‌ಸಿ– ತಿಲಕ್ ಮೆಮೋರಿಯಲ್‌ ಹಾಗೂ ಆರ್‌ಡಬ್ಲ್ಯುಎಫ್‌– ಡಿವೈಇಎಸ್‌ ತಂಡಗಳು ಎದುರಾಗಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು