ಮಂಗಳವಾರ, ಮೇ 17, 2022
29 °C
ಬಿಡಿಎಫ್‌ಎ ಸೂಪರ್ ಡಿವಿಷನ್ ಲೀಗ್

ಫುಟ್‌ಬಾಲ್ ಚಾಂಪಿಯನ್‌ಷಿಪ್‌: ಬಿಎಫ್‌ಸಿ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭರ್ಜರಿ ಆಟವಾಡಿದ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ತಂಡವು ಬಿಡಿಎಫ್‌ಎ ಸೂಪರ್‌ ಲೀಗ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಗುರುವಾರ 3–0 ಗೋಲುಗಳ ಅಂತರದಿಂದ ಎಡಿಇ ಎಫ್‌ಸಿ ತಂಡವನ್ನು ಮಣಿಸಿತು.

ವಿಜೇತ ತಂಡದ ಪರ ದಮೈಲ್‌ಫಾಂಗ್ ಲಿಂಗ್ಡೊ (52ನೇ ನಿಮಿಷ), ಹೈದ್ರೊಮ್‌ ತೋಯ್ ಸಿಂಗ್‌ (56ನೇ ನಿಮಿಷ) ಹಾಗೂ ಜಗದೀಪ್ ಸಿಂಗ್‌ (64ನೇ ನಿಮಿಷ) ಕಾಲ್ಚಳಕ ತೋರಿದರು.

ಮತ್ತೊಂದು ಹಣಾಹಣಿಯಲ್ಲಿ ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡವು 3–0ಯಿಂದ ಬೆಂಗಳೂರು ಡ್ರೀಮ್ ಯುನೈಟೆಡ್ ತಂಡದ ಎದುರು ಗೆಲುವು ಸಾಧಿಸಿತು. ಕಿಕ್‌ಸ್ಟಾರ್ಟ್‌ ತಂಡದ ಸುಧೀರ್‌ ಕೋಟಿಕೇಳ (10ನೇ ನಿಮಿಷ), ನಿಖಿಲ್‌ ರಾಜ್ ಎಂ. (57ನೇ ನಿಮಿಷ) ಮತ್ತು ಜಾನ್ ಪೀಟರ್‌ (90ನೇ ನಿಮಿಷ, ಪೆನಾಲ್ಟಿ) ಗೋಲು ಹೊಡೆದರು.

ಶುಕ್ರವಾರ ಈಗಲ್ಸ್ ಎಫ್‌ಸಿ ಮತ್ತು ಎಎಸ್‌ಸಿ ಸೆಂಟರ್‌ ಎಫ್‌ಸಿ ನಡುವೆ ಸೆಣಸಾಟ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು