ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡುರಾಂಡ್‌ ಕಪ್‌: ಬೋಡೋಲ್ಯಾಂಡ್‌ಗೆ ರೋಚಕ ಜಯ

Published : 13 ಆಗಸ್ಟ್ 2024, 2:57 IST
Last Updated : 13 ಆಗಸ್ಟ್ 2024, 2:57 IST
ಫಾಲೋ ಮಾಡಿ
Comments

ಕೊಕ್ರಜಾರ್, ಅಸ್ಸಾಂ: ಬೋಡೋಲ್ಯಾಂಡ್ ಎಫ್‌ಸಿ ತಂಡವು ಸೋಮವಾರ 133ನೇ ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ರೋಚಕ ಹಣಾಹಣಿಯಲ್ಲಿ 4-3 ಗೋಲುಗಳಿಂದ ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಎಫ್‌ಟಿ ತಂಡವನ್ನು ಮಣಿಸಿತು.

ಆತಿಥೇಯ ಬೋಡೋಲ್ಯಾಂಡ್ ಪರ ಜಂಗ್ಬ್ಲಾ ಬ್ರಹ್ಮ (54, 71ನೇ ನಿಮಿಷ) ಎರಡು ಗೋಲು ಗಳಿಸಿದರೆ, ಮಿಟಿಂಗ ಡ್ವಿಮರಿ (2ನೇ ನಿ.) ಮತ್ತು ಸಿಬ್ರಾ ನರ್ಜಾರಿ (62ನೇ ನಿ) ತಲಾ ಒಂದು ಗೋಲು ಗಳಿಸಿದರು.

ಬಿಎಸ್‌ಎಫ್ ಪರ ಕಿಶೋರಿ (50 ಮತ್ತು 69ನೇ ನಿ.) ಎರಡು ಹಾಗೂ ಆಸಿಫ್ ಖಾನ್ (89ನೇ) ಒಮ್ಮೆ ಚೆಂಡನ್ನು ಗುರಿ ಸೇರಿಸಿದರು.

ಬೋಡೋಲ್ಯಾಂಡ್ ತಂಡವು ತನ್ನ ಗುಂಪು ಹಂತದ ಅಭಿಯಾನವನ್ನು ಆರು ಅಂಕಗಳೊಂದಿಗೆ ಪೂರ್ಣಗೊಳಿಸಿತು. ‘ಇ’ ಗುಂಪಿನಲ್ಲಿ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದರೆ, ಒಂದರಲ್ಲಿ ಸೋತಿದೆ. ಈ ಮೂಲಕ ನಾಕೌಟ್ ಹಂತಕ್ಕೆ ಮುನ್ನಡೆಯುವ ಅವಕಾಶವನ್ನು ಜೀವಂತವಾಗಿ ಇರಿಸಿಕೊಂಡಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT