ಬುಧವಾರ, ಜುಲೈ 28, 2021
21 °C

ಮಹಿಳಾ ವಿಶ್ವಕಪ್‌ ಆತಿಥ್ಯ: ಬಿಡ್‌ ಹಿಂಪಡೆದ ಬ್ರೆಜಿಲ್‌

ಎಪಿ Updated:

ಅಕ್ಷರ ಗಾತ್ರ : | |

Prajavani

ಸಾವೊ ಪಾಲೊ: 2023ರ ಮಹಿಳಾ ವಿಶ್ವಕಪ್ ಫುಟ್‌ಬಾಲ್‌ಗೆ ಆತಿಥ್ಯ ವಹಿಸುವ ಬಿಡ್‌ ಪ್ರಕ್ರಿಯೆಯಿಂದ ಬ್ರೆಜಿಲ್‌ ಹಿಂದೆ ಸರಿದಿದೆ. ಫಿಫಾಗೆ ಅಗತ್ಯವಿರುವ ಹಣಕಾಸಿನ ಭರವಸೆಯನ್ನು ಕೋವಿಡ್‌–19 ಪಿಡುಗಿನ ಪರಿಣಾಮದಿಂದಾಗಿ ನೀಡಲು ತನಗೆ ಸಾಧ್ಯವಾಗುವುದಿಲ್ಲ ಎಂದು ಆ ದೇಶ ಹೇಳಿದೆ.

ಆದರೆ ಜಪಾನ್ ವಿರುದ್ಧ ಕೊಲಂಬಿಯಾ ಬಿಡ್ ಮತ್ತು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಜಂಟಿ ಉಮೇದುವಾರಿಕೆಯನ್ನು ಬೆಂಬಲಿಸುವುದಾಗಿ ಬ್ರೆಜಿಲ್ ಫುಟ್‌ಬಾಲ್‌ ಫೆಡರೇಷನ್‌ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ. ದಕ್ಷಿಣ ಅಮೆರಿಕಾ ತಂಡಗಳಿಗೆ ಇದುವರೆಗೆ ಮಹಿಳಾ ವಿಶ್ವಕಪ್‌ ಆತಿಥ್ಯ ಒಲಿದಿಲ್ಲ.‌ 

ಇದೇ‌ 25ಕ್ಕೆ ಈ ಕುರಿತು ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ. ಕೋವಿಡ್‌ ಮಹಾಮಾರಿಯಿಂದಾಗಿ ಬ್ರೆಜಿಲ್‌ಗೆ ಆರ್ಥಿಕವಾಗಿ ಸಾಕಷ್ಟು ನಷ್ಟವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು