ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿ.ಪುಟ್ಟಯ್ಯ ಕಪ್‌ ಫುಟ್‌ಬಾಲ್‌ ಟೂರ್ನಿ ಇಂದಿನಿಂದ

Published : 22 ಸೆಪ್ಟೆಂಬರ್ 2024, 14:08 IST
Last Updated : 22 ಸೆಪ್ಟೆಂಬರ್ 2024, 14:08 IST
ಫಾಲೋ ಮಾಡಿ
Comments

ಬೆಂಗಳೂರು: ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದಲ್ಲಿ ಸಿ.ಪುಟ್ಟಯ್ಯ ಕಪ್‌ ಫುಟ್‌ಬಾಲ್‌ ಟೂರ್ನಿ ಸೋಮವಾರದಿಂದ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆಯಲಿದೆ.

ಕರ್ನಾಟಕದ ಅತ್ಯಂತ ಹಳೆಯ ಟೂರ್ನಿ ಇದಾಗಿದೆ. ಹಾಲಿ ಚಾಂಪಿಯನ್‌ ಎಫ್‌ಸಿ ಅಗ್ನಿಪುತ್ರ, ಹಾಲಿ ರನ್ನರ್‌ ಅಪ್‌ ಎಂಎಫ್‌ಎಆರ್‌ ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿ ಸೇರಿದಂತೆ ಒಟ್ಟು 13 ತಂಡಗಳು ಸೆಣಸಾಟ ನಡೆಸಲಿವೆ. ‌

ಎ ಗುಂಪಿನಲ್ಲಿ ಕೊಡಗು ಎಫ್‌ಸಿ, ಎಫ್‌ಸಿ ರಿಯಲ್‌ ಬೆಂಗಳೂರು, ರೆಬೆಲ್ಸ್‌ ಎಫ್‌ಸಿ; ಬಿ ಗುಂಪಿನಲ್ಲಿ ಎಂಎಫ್‌ಎಆರ್‌ ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿ, ಎಎಸ್‌ಸಿ ಅಂಡ್ ಸೆಂಟರ್‌ ಎಫ್‌ಸಿ, ಕಿಕ್‌ಸ್ಟಾರ್ಟ್‌ ಎಫ್‌ಸಿ, ರೂಟ್ಸ್‌ ಎಫ್‌ಸಿ; ಸಿ ಗುಂಪಿನಲ್ಲಿ ಸೌತ್‌ ಯುನೈಟೆಡ್‌ ಎಫ್‌ಸಿ, ಎಫ್‌ಸಿ ಅಗ್ನಿಪುತ್ರ, ಪರಿಕ್ರಮ ಎಫ್‌ಸಿ; ಡಿ ಗುಂಪಿನಲ್ಲಿ ಬೆಂಗಳೂರು ಎಫ್‌ಸಿ, ಎಫ್‌ಸಿ ಬೆಂಗಳೂರು ಯುನೈಟೆಡ್‌, ಬೆಂಗಳೂರು ಇಂಡಿಪೆಂಡೆಂಟ್ಸ್‌ ಎಫ್‌ಸಿ ತಂಡಗಳಿವೆ.

ಉದ್ಘಾಟನಾ ಪಂದ್ಯದಲ್ಲಿ ಕೊಡಗು ಎಫ್‌ಸಿ ಮತ್ತು ಎಫ್‌ಸಿ ರಿಯಲ್‌ ಬೆಂಗಳೂರು ಮುಖಾಮುಖಿಯಾಗಲಿವೆ. ಈ ಟೂರ್ನಿಯ ಬೆನ್ನಲ್ಲೇ (ಅ.7ರಂದು) ಸೂಪರ್ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್ ಆರಂಭವಾಗಲಿದೆ.

ಇಂದಿನ ಪಂದ್ಯಗಳು

ಕೊಡಗು ಎಫ್‌ಸಿ– ಎಫ್‌ಸಿ ರಿಯಲ್‌ ಬೆಂಗಳೂರು (ಮಧ್ಯಾಹ್ನ 1ಗಂಟೆ)

ಪರಿಕ್ರಮ ಎಫ್‌ಸಿ– ಸೌತ್‌ ಯುನೈಟೆಡ್‌ ಎಫ್‌ಸಿ (ಸಂಜೆ 4)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT