ಬೆಂಗಳೂರು: ಮಾಜಿ ಚಾಂಪಿಯನ್ ಬೆಂಗಳೂರು ಎಫ್‌ಸಿ ತಂಡ 133ನೇ ಡುರಾಂಡ್ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಇಂಟರ್ ಕಾಶಿ ಎಫ್.ಸಿ ವಿರುದ್ಧ 3–0 ಗೋಲುಗಳಿಂದ ಸುಲಭ ಜಯ ಸಾಧಿಸಿತು.
ಶನಿವಾರ ನಡೆದ ‘ಬಿ’ ಗುಂಪಿನ ಪಂದ್ಯವು ಏಕಪಕ್ಷೀಯವಾಗಿತ್ತು. ಬಿಎಫ್‌ಸಿ ಪರವಾಗಿ 17ನೇ ನಿಮಿಷದಲ್ಲಿ ಎಡ್ಗರ್ ಮೆಂಡೆಜ್, 77ನೇ ನಿಮಿಷದಲ್ಲಿ ಆಲ್ಬರ್ಟೊ ನೊಗುರಾ ಮತ್ತು 83ನೇ ನಿಮಿಷದಲ್ಲಿ ನಾಯಕ ಸುನಿಲ್ ಚೆಟ್ರಿ ಚೆಂಡನ್ನು ಗುರಿ ಸೇರಿಸಿದರು.
ಬುಧವಾರ ಮೊದಲ ಪಂದ್ಯದಲ್ಲಿ ಬಿಎಫ್‌ಸಿ 4–0ರಿಂದ ಇಂಡಿಯನ್ ನೇವಿ ಎಫ್‌ಟಿ ತಂಡವನ್ನು ಮಣಿಸಿತ್ತು. ಮಂಗಳವಾರ ಮೊಹಮದನ್ ಎಸ್‌ಸಿ ತಂಡವನ್ನು ಎದುರಿಸಲಿದೆ.