ಭಾನುವಾರ, ನವೆಂಬರ್ 27, 2022
26 °C

ಫುಟ್‌ಬಾಲ್‌: ಭಾರತ– ಸಿಂಗಪುರ ಪಂದ್ಯ ಡ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊ ಚಿ ಮಿನ್‌ ಸಿಟಿ (ಪಿಟಿಐ): ಭಾರತ ತಂಡ ಫಿಫಾ ಅಂತರರಾಷ್ಟ್ರೀಯ ಸೌಹಾರ್ದ ಫುಟ್‌ಬಾಲ್‌ ಪಂದ್ಯದಲ್ಲಿ ಸಿಂಗಪುರ ಜತೆ 1–1 ಗೋಲುಗಳ ಡ್ರಾ ಸಾಧಿಸಿತು.

ಶನಿವಾರ ನಡೆದ ಪಂದ್ಯದ 37ನೇ ನಿಮಿಷದಲ್ಲಿ ಇಖ್ಸನ್ ಫಂಡಿ ಅವರು ಸಿಂಗಪುರ ತಂಡಕ್ಕೆ ಮುನ್ನಡೆ ತಂದಿತ್ತರು. ಫ್ರೀಕಿಕ್‌ನಲ್ಲಿ ಅವರು 25 ಯಾರ್ಡ್‌ ದೂರದಿಂದ ಒದ್ದ ಚೆಂಡು ಭಾರತದ ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಸಂಧು ಅವರನ್ನು ಕಬಳಿಸಿ ಗುರಿ ಸೇರಿತು.

ಆದರೆ ಸಿಂಗಪುರ ಆಟಗಾರರ ಸಂಭ್ರಮ ಹೆಚ್ಚುಹೊತ್ತು ಇರಲಿಲ್ಲ. ಆಶಿಕ್‌ ಕುರುನಿಯನ್‌ 43ನೇ ನಿಮಿಷದಲ್ಲಿ ಭಾರತಕ್ಕೆ ಸಮಬಲದ ಗೋಲು ತಂದಿತ್ತರು. ಸುನಿಲ್‌ ಚೆಟ್ರಿ ನೀಡಿದ ನಿಖರ ಪಾಸ್‌ನಲ್ಲಿ ಚೆಂಡನ್ನು ನಿಯಂತ್ರಣಕ್ಕೆ ಪಡೆದುಕೊಂಡ ಆಶಿಕ್‌, ಗುರಿ ಸೇರಿಸುವಲ್ಲಿ ಯಾವುದೇ ತಪ್ಪು ಮಾಡಲಿಲ್ಲ.

ಭಾರತ ತಂಡ ಫಿಫಾ ರ‍್ಯಾಂಕಿಂಗ್‌ನಲ್ಲಿ 104ನೇ ಸ್ಥಾನದಲ್ಲಿದ್ದರೆ, ಸಿಂಗಪುರ 159ನೇ ಸ್ಥಾನದಲ್ಲಿದೆ. 2012 ರಲ್ಲಿ ಇವೆರಡು ತಂಡಗಳು ಕೊನೆಯದಾಗಿ ಎದುರಾಗಿದ್ದಾಗ ಸಿಂಗಪುರ 2–0 ರಲ್ಲಿ ಗೆದ್ದಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು