ಬುಧವಾರ, ಜೂನ್ 16, 2021
28 °C

ಕೋವಿಡ್‌: ಮಾಜಿ ಫುಟ್‌ಬಾಲ್ ಆಟಗಾರ ಉದಯಕುಮಾರ್ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಫುಟ್‌ಬಾಲ್ ಆಟಗಾರ ಉದಯ್‌ಕುಮಾರ್ (61) ಅವರು ಕೋವಿಡ್‌ನಿಂದಾಗಿ ಶುಕ್ರವಾರ ಇಲ್ಲಿ ನಿಧನರಾದರು. ಅವರಿಗೆ ಒಬ್ಬ ಪುತ್ರಿಯಿದ್ದಾರೆ.

1978ರಲ್ಲಿ ಬಿ.ಸಿ.ರಾಯ್ ಟ್ರೋಫಿ ಜೂನಿಯರ್ ರಾಷ್ಟ್ರೀಯ ಟೂರ್ನಿಯಲ್ಲಿ ಕರ್ನಾಟಕ ತಂಡದ ಪರ ಕಣಕ್ಕಿಳಿದಿದ್ದ ಅವರು, ಮರು ವರ್ಷ ಸಂತೋಷ್‌ ಟ್ರೋಫಿ ಟೂರ್ನಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು.

1979ರಲ್ಲಿ ಚೀನಾ ಪ್ರವಾಸಕ್ಕಾಗಿ ರಾಷ್ಟ್ರೀಯ ಜೂನಿಯರ್ ತಂಡಕ್ಕೆ ಆಯ್ಕೆಯಾದರೂ, ಕೆಲವು ಕಾರಣಗಳಿಂದಾಗಿ ಈ ಪ್ರವಾಸ ರದ್ದಾಗಿತ್ತು.

ಎಚ್‌ಎಎಲ್‌ ಎಫ್‌ಸಿ, ಬಿನ್ನಿ ಎಫ್‌ಸಿ, ಎಜಿಒಆರ್‌ಸಿ ಮತ್ತು ಸಿಐಎಲ್‌ ಎಫ್‌ಸಿ ಕ್ಲಬ್ ತಂಡಗಳ ಪರವೂ ಉದಯ್‌ಕುಮಾರ್ ಆಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು