ಮಂಗಳವಾರ, ಜನವರಿ 21, 2020
18 °C

ಬಾಲಕಿಯರ ಫುಟ್‌ಬಾಲ್ ಟೂರ್ನಿ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಖೇಲೊ ಇಂಡಿಯಾ ಯೋಜನೆಯಡಿ ನಡೆಯುವ 17 ವರ್ಷದೊಳಗಿನ ಬಾಲಕಿಯರ ಫುಟ್‌ಬಾಲ್ ಟೂರ್ನಿಗೆ ರಾಜ್ಯ ಫುಟ್‌ಬಾಲ್ ಸಂಸ್ಥೆ ಆತಿಥ್ಯ ವಹಿಸಲಿದೆ. ಪಂದ್ಯಗಳು ನಗರದ ಸಾಯ್ ಮೈದಾನದಲ್ಲಿ ಭಾನುವಾರ ಆರಂಭವಾಗಲಿವೆ.

ಮೊದಲ ದಿನ ಮಧ್ಯಾಹ್ನ 2 ಗಂಟೆಗೆ ‘ಬಿ’ ಗುಂಪಿನ ಪಂದ್ಯದಲ್ಲಿ ಗ್ರೀನ್‌ವುಡ್ ಎಫ್‌ಸಿ ಮತ್ತು ಬೆಂಗಳೂರು ಬ್ಲೂಸ್ ಎಫ್‌ಸಿ ತಂಡಗಳು ಸೆಣಸಲಿದ್ದು 3.45ಕ್ಕೆ ’ಎ’ ಗುಂಪಿನ ಪಂದ್ಯದಲ್ಲಿ ಜಿಆರ್‌ಕೆ ಗರ್ಲ್ಸ್‌ ಎಫ್‌ಸಿ ಮತ್ತು ಬೆಂಗಳೂರು ಸ್ಟಾರ್ಸ್‌ ಎಫ್‌ಸಿ ನಡುವೆ ಹಣಾಹಣಿ ನಡೆಯಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು