ನವದೆಹಲಿ: ಅರ್ಜುನ ಪುರಸ್ಕಾರ ಹಾಗೂ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ (ಎಐಎಫ್‌ಎಫ್) ವರ್ಷದ ಆಟಗಾರ ಪ್ರಶಸ್ತಿ ವಿಜೇತ ಗುರುಪ್ರೀತ್ ಸಿಂಗ್ ಸಂಧು ಅವರು ಮೊದಲ ಬಾರಿಗೆ ನಡೆಸುತ್ತಿರುವ ಆನ್‌ಲೈನ್ ಗೋಲ್‌ಕೀಪಿಂಗ್ ಮಾರ್ಗದರ್ಶನ ತರಗತಿಗೆ ಹಾಜರಾಗಲಿದ್ದಾರೆ.

ಶುಕ್ರವಾರದಿಂದ ಮೂರು ದಿನಗಳ ಕಾಲ ತರಗತಿ ನಡೆಯಲಿದ್ದು, ಗುರುಪ್ರೀತ್ ಹೊರತುಪಡಿಸಿ 29 ಆಟಗಾರರು ಹಾಜರಾಗಲಿದ್ದಾರೆ. ತರಬೇತಿಗಾಗಿ 200 ಮಂದಿ ಅರ್ಜಿ ಸಲ್ಲಿಸಿದ್ದರು.

‘ಆನ್‌ಲೈನ್ ಗೋಲ್‌ಕೀಪಿಂಗ್ ತರಬೇತಿ ಸರ್ಟಿಫಿಕೇಟ್ ಕೋರ್ಸ್‌ನಲ್ಲಿ ಭಾಗವಹಿಸಲು ಉತ್ಸುಕನಾಗಿದ್ದೇನೆ. ಇಂತಹ ತರಗತಿಗೆ ನಾನು ಮೊದಲ ಬಾರಿ ಪಾಲ್ಗೊಳ್ಳುತ್ತಿರುವೆ. ಪರಿಣತ ತರಬೇತುದಾರರಿಂದ ಕಲಿಯಲು ಕಾತರನಾಗಿದ್ದೇನೆ‘ ಎಂದು ಗುರುಪ್ರೀತ್ ಹೇಳಿದ್ದಾಗಿ ಎಐಎಫ್‌ಎಫ್ ವೆಬ್‌ಸೈಟ್ ಉಲ್ಲೇಖಿಸಿದೆ.

ಎಎಫ್‌ಸಿ ಮೊದಲ ಹಂತದ ಗೋಲ್‌ಕೀಪಿಂಗ್ ತರಗತಿ ಹಾಗೂ ಎಐಎಫ್‌ಎಫ್ ಸಿ ಸರ್ಟಿಫಿಕೇಟ್ ಕೋರ್ಸ್‌ಗೆ ಅರ್ಹತೆ ಪಡೆಯಲು ಈ ಆನ್‌ಲೈನ್ ತರಗತಿ ಅಗತ್ಯ ಎಂದು ಪರಿಗಣಿಸಲಾಗಿದೆ.

ದಿನೇಶ್ ನಾಯರ್ ಮತ್ತು ಗುಂಪೆ ರೈಮ್ ಅವರು ಮುಖ್ಯ ತರಬೇತುದಾರರಾಗಿದ್ದು, ರಜತ್ ಗುಹಾ, ರಘುವೀರ್ ಖಾನೋಲ್ಕರ್ ಹಾಗೂ ಪ್ರದ್ಯುಮ್ ರೆಡ್ಡಿ ಸಹಾಯಕ ಕೋಚ್‌ಗಳಾಗಿದ್ದಾರೆ.

ಪ್ರತಿಭೆಗಳ ಹುಡುಕಾಟಕ್ಕಾಗಿ ಆನ್‌ಲೈನ್ ಕಾರ್ಯಾಗಾರವು ಅಕ್ಟೋಬರ್ 12ರಿಂದ 16ರವರೆಗೆ ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.