ಶನಿವಾರ, ಜುಲೈ 2, 2022
22 °C

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್: ಒಡಿಶಾ ಎಫ್‌ಸಿ ಎದುರು ಹೈದರಾಬಾದ್‌ಗೆ ಗೆಲುವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಸ್ಕೊ: ಅಮೋಘ ಆಟವಾಡಿದ ಹೈದರಾಬಾದ್ ಎಫ್‌ಸಿ ತಂಡ ಗುರುವಾರ ರಾತ್ರಿ ಇಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಒಡಿಶಾ ಎಫ್‌ಸಿಯನ್ನು 3–2ರಲ್ಲಿ ಮಣಿಸಿತು.

ಹೈದರಾಬಾರ್ ಪರ ಚಿಯಾನಿಸ್ (51ನೇ ನಿಮಿಷ), ಜಾವೊ (70ನೇ ನಿ) ಹಾಗೂ ಮಿಶ್ರಾ (73ನೇ ನಿ) ಗೋಲು ಗಳಿಸಿದರು. ಒಡಿಶಾಗಾಗಿ ಜೆರಿ (45ನೇ ನಿ) ಮತ್ತು ಜೊನಾಥನ್ (74ನೇ ನಿ) ಗೋಲು ಗಳಿಸಿದರು.

ಜೆಎಫ್‌ಸಿಗೆ ಗೋವಾ ಎದುರಾಳಿ

ಬ್ಯಾಂಬೊಲಿಮ್‌ನಲ್ಲಿ ಶುಕ್ರವಾರ ರಾತ್ರಿ ನಡೆಯಲಿರುವ ಪಂದ್ಯದಲ್ಲಿ ಜೆಮ್ಶೆಡ್‌ಪುರ್ ಎಫ್‌ಸಿ ಮತ್ತು ಆತಿಥೇಯ ಎಫ್‌ಸಿ ಗೋವಾ ತಂಡಗಳು ಮುಖಾಮುಖಿಯಾಗಲಿವೆ. 11 ಪಂದ್ಯಗಳ ಪೈಕಿ ಐದರಲ್ಲಿ ಜಯ ಗಳಿಸಿ ನಾಲ್ಕನ್ನು ಡ್ರಾ ಮಾಡಿಕೊಂಡಿರುವ ಜೆಮ್ಶೆಡ್‌ಪುರ ಈ ಬಾರಿ ಉತ್ತಮ ಸಾಮರ್ಥ್ಯ ತೋರುತ್ತಿದೆ. ಡ್ಯಾನಿಯಲ್‌ ಚಿಮಾ ಚುಕ್ವು ಜೊತೆ ಒಪ್ಪಂದ ಮಾಡಿಕೊಂಡಿರುವುದು ತಂಡದ ಬಲವನ್ನು ಇನ್ನಷ್ಟು ಹೆಚ್ಚಿಸಿದೆ. 

ಫಾರ್ವರ್ಡ್ ಆಟಗಾರ ಗ್ರೆಗ್ ಸ್ಟೀವರ್ಟ್‌ ಅವರು ತಂಡದ ಆಕ್ರಮಣ ವಿಭಾಗದ ನೇತೃತ್ವ ವಹಿಸಿದ್ದು ಜೋರ್ಡನ್ ಮರೆ ಅವರಿಂದ ಸ್ಟೀವರ್ಟ್‌ಗೆ ಉತ್ತಮ ಬೆಂಬಲ ಸಿಗುತ್ತಿದೆ.

ಗೋವಾ ಈ ಬಾರಿ ನೀರಸ ಆಟವಾಡಿದೆ. ಹಿಂದಿನ ಮೂರು ಪಂದ್ಯಗಳಲ್ಲಿ ತಂಡ ಜಯ ಕಾಣಲಿಲ್ಲ. ಈ ಪೈಕಿ ಒಂದರಲ್ಲಿ ಸೋತಿದೆ. 13 ಪಂದ್ಯಗಳ ಪೈಕಿ ಮೂರರಲ್ಲಿ ಮಾತ್ರ ಜಯ ಗಳಿಸಿದ್ದು ಐದನ್ನು ಡ್ರಾ ಮಾಡಿಕೊಂಡಿದೆ. ಸೆಟ್‌ಪೀಸ್ ಮೂಲಕ ಗೋಲು ಗಳಿಸುವುದರಲ್ಲಿ ತಂಡ ಉತ್ತಮ ಸಾಧನೆ ಮಾಡಿದೆ. ಇದರಲ್ಲಿ ಜೆಮ್ಶೆಡ್‌ಪುರ ಎಫ್‌ಸಿ ಕೂಡ ಬಲಿಷ್ಠವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು