ಜಮ್ಷೆಡ್ಪುರ: ಕೊನೆಯ ಕ್ಷಣದಲ್ಲಿ ಗಳಿಸಿದ ಗೋಲುಗಳ ನೆರವಿನಿಂದ ಜಮ್ಷೆಡ್ಪುರ ತಂಡವು ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಪಂದ್ಯದಲ್ಲಿ 2–1 ಗೋಲುಗಳಿಂದ ಬೆಂಗಳೂರು ಎಫ್ಸಿ ತಂಡವನ್ನು ಮಣಿಸಿತು.

ಇಲ್ಲಿನ ಜೆಆರ್ಡಿ ಟಾಟಾ ಕ್ರೀಡಾ ಕಾಂಪ್ಲೆಕ್ಸ್ನಲ್ಲಿ ಶನಿವಾರ ನಡೆದ ಪಂದ್ಯದ ಮಧ್ಯಂತರದ ವೇಳೆ ಬಿಎಫ್ಸಿ ತಂಡವು 1–0 ಮುನ್ನಡೆ ಪಡೆದಿತ್ತು. ಆದರೆ, ಉತ್ತರಾರ್ಧದಲ್ಲಿ ಚುರುಕಿನ ಆಟ ವಾಡಿದ ಆತಿಥೇಯರು ಎರಡು ಗೋಲು ಗಳಿಸಿ ಜಯಭೇರಿ ಬಾರಿಸಿದರು.

ಜಮ್ಷೆಡ್ಪುರ ತಂಡದ ಪರ ಜೋರ್ಡಾನ್ ಮರ್ರೆ (84ನೇ ನಿಮಿಷ) ಮತ್ತು ಮುಹಮ್ಮದ್ ಒವೈಸ್ (90ನೇ ನಿಮಿಷ) ಗೋಲು ಹೊಡೆದರು. ಬೆಂಗಳೂರು ತಂಡದ ಪರ ಅಲ್ಬಿನೊ ನೊಗುಯೆರಾ (19ನೇ ನಿಮಿಷ) ಏಕೈಕ ಗೋಲು ತಂದಿತ್ತರು.

ಈ ಗೆಲುವಿನೊಂದಿಗೆ ಜಮ್ಷೆಡ್ಪುರ ತಂಡವು 24 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಏರಿದೆ. ಬಿಎಫ್ಸಿ ತಂಡವು 27 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿ ಮುಂದುವರಿದಿದೆ.

ದಿನದ ಮತ್ತೊಂದು ಪಂದ್ಯದಲ್ಲಿ ಗೋವಾ ಎಫ್ಸಿ ತಂಡವು 4–2 ಗೋಲುಗಳಿಂದ ಒಡಿಶಾ ಎಫ್ಸಿ ತಂಡವನ್ನು ಸೋಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.