ಐಎಸ್ಎಲ್: ಚೆನ್ನೈಯಿನ್ಗೆ ಕೇರಳ ಸವಾಲು

ವಾಸ್ಕೊ: ಗೆಲುವಿನ ಲಯ ಮುಂದುವರಿಸುವ ಛಲದಲ್ಲಿರುವ ಚೆನ್ನೈಯಿನ್ ಎಫ್ಸಿ ತಂಡವು ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿ ಯಲ್ಲಿ ಬುಧವಾರ ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ಮುಖಾಮುಖಿಯಾಗಲಿದೆ.
ಚೆನ್ನೈಯಿನ್ ಕಳೆದ ಪಂದ್ಯದಲ್ಲಿ 2-1 ಗೆಲುವಿನೊಂದಿಗೆ ಒಟ್ಟು 11 ಪಾಯಿಂಟ್ಸ್ ಕಲೆಹಾಕಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಗಳಿಸಿತ್ತು.ಕೇರಳ ಬ್ಲಾಸ್ಟರ್ಸ್ ಇದುವರೆಗೆ ಎರಡು ಗೆಲುವು, ಒಂದು ಸೋಲು ಮತ್ತು ಮೂರು ಡ್ರಾ ಸಾಧಿಸಿದ್ದು, ಕಳೆದ ಪಂದ್ಯದಲ್ಲಿ ಮುಂಬೈ ಸಿಟಿ ಎಫ್ಸಿ ವಿರುದ್ಧ ಅಮೋಘ ಗೆಲುವು ಸಾಧಿಸಿತ್ತು. ಅದೇ ಉತ್ಸಾಹದೊಂದಿಗೆ ಮುಂದುವರಿಯುವ ಛಲದಲ್ಲಿದೆ.
ಪಂದ್ಯ ಆರಂಭ: ರಾತ್ರಿ 7.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.