ರಫೆಲ್, ರಹೀಂ ಮಿಂಚು: ಚೆನ್ನೈಯಿನ್ಗೆ ಜಯ
ಮಡಗಾಂವ್: ರಫೆಲ್ ಕ್ರಿವೆಲ್ಲಾರೊ ಹಾಗೂ ರಹೀಂ ಅಲಿ ಅವರು ಮಾಡಿದ ಮೋಡಿಯಿಂದಾಗಿ ಚೆನ್ನೈಯಿನ್ ತಂಡವು ಜಯಿಸಿತು. ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಶನಿವಾರ 2–1 ಗೋಲುಗಳಿಂದ ಆತಿಥೇಯ ಗೋವಾ ತಂಡಕ್ಕೆ ಆಘಾತ ನೀಡಿತು.
ಇಲ್ಲಿಯ ಫಟೋರ್ಡಾ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯಲ್ಲಿ ಉಭಯ ತಂಡಗಳು ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದವು. ಐದನೇ ನಿಮಿಷದಲ್ಲಿ ರಫೆಲ್ ಕಾಲ್ಚಳಕ ತೋರಿದರು. ಆದರೆ ತಂಡದ ಈ ಮುನ್ನಡೆ ಬಹಳ ಹೊತ್ತು ಉಳಿಯಲಿಲ್ಲ.
ಒಂಬತ್ತನೇ ನಿಮಿಷದಲ್ಲೇ ಗೋವಾ ತಂಡದ ಜಾರ್ಜ್ ಮೆಂಡೊಜಾ ಅವರು ಅಲೆಕ್ಸಾಂಡರ್ ಜೇಸುರಾಜ್ ನೆರವಿನಲ್ಲಿ ಗೋಲು ದಾಖಲಿಸಿ ಸಮಬಲ ಸಾಧಿಸಿದರು. 53ನೇ ನಿಮಿಷದಲ್ಲಿ ರಹೀಂ ಗೆಲುವಿನ ಗೋಲು ಹೊಡೆದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.