ಶನಿವಾರ, ಏಪ್ರಿಲ್ 4, 2020
19 °C

ಐಎಸ್‌ಎಲ್‌: ಎಚ್‌ಎಫ್‌ಸಿಗೆ ಸಮಾಧಾನದ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುವಾಹಟಿ: ಪಾಯಿಂಟ್‌ ಪಟ್ಟಿಯಲ್ಲಿ ತಳದಲ್ಲಿರುವ ಎರಡು ತಂಡಗಳ ಮುಖಾಮುಖಿಯಲ್ಲಿ ಹೈದರಾಬಾದ್ ಎಫ್‌ಸಿ (ಎಚ್‌ಎಫ್‌ಸಿ) ತಂಡ 5–1 ಗೋಲುಗಳಿಂದ ನಾರ್ತ್‌ ಈಸ್ಟ್‌ ಯುನೈಟೆಡ್‌ ತಂಡವನ್ನು ಸೋಲಿಸಿತು. ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಈ ಪಂದ್ಯದಲ್ಲಿ ಹೈದರಾಬಾದ್‌ ತಂಡಕ್ಕೆ ಇದು ಎರಡನೇ ಜಯ.

ಮೊದಲ ಬಾರಿ ಐಎಸ್‌ಎಲ್‌ನಲ್ಲಿ ಆಡಿದ್ದ ಹೈದರಾಬಾದ್‌ ತಂಡ ಲೀಗ್‌ ವ್ಯವಹಾರವನ್ನು ಕೊನೆಯ ಸ್ಥಾನದಲ್ಲಿ ಮುಗಿಸಿತು. ಈ ತಂಡ 18 ಪಂದ್ಯಗಳಿಂದ 10 ಪಾಯಿಂಟ್ಸ್‌ ಸಂಗ್ರಹಿಸಿತು. ನಾರ್ತ್‌ ಈಸ್ಟ್‌ 17 ಪಂದ್ಯಗಳಿಂದ 13 ಪಾಯಿಂಟ್ಸ್‌ ಸಂಗ್ರಹಿಸಿ 9ನೇ
ಸ್ಥಾನದಲ್ಲಿದೆ.

ಇಂದಿರಾ ಗಾಂಧಿ ಅಥ್ಲೆಟಿಕ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಲಿಸ್ಟನ್‌ ಕೊಲಾಕೊ (11, 40ನೇ ನಿಮಿಷ), ಮಾರ್ಸಿಲಿನೊ ಲೀಟ್‌ ಪೆರೇರಾ (13, 88) ಮತ್ತು ಮೊಹಮ್ಮದ್‌ ಯಾಸಿರ್‌ (55) ಅವರು ಹೈದರಾಬಾದ್‌ ತಂಡದ ಪರ ಸ್ಕೋರ್ ಮಾಡಿದರು.

ನಾರ್ತ್‌ ಈಸ್ಟ್‌ ತಂಡದ ಏಕೈಕ ಗೋಲು 35ನೇ ನಿಮಿಷ ಆ್ಯಂಡಿ ಕಿಯೋಗ್‌ ಮೂಲಕ ಬಂತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು