ಶನಿವಾರ, ಏಪ್ರಿಲ್ 4, 2020
19 °C

ಐಎಸ್‌ಎಲ್‌: ಪ್ರಶಸ್ತಿ ಸುತ್ತಿಗೆ ಚೆನ್ನೈಯಿನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಗಾಂವ್‌: ಎರಡು ಬಾರಿಯ ಚಾಂಪಿಯನ್‌ ಚೆನ್ನೈಯಿನ್‌ ಎಫ್‌ಸಿ ತಂಡ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಆರನೇ ಆವೃತ್ತಿಯಲ್ಲಿ ಫೈನಲ್‌ ಪ್ರವೇಶಿಸಿದೆ.

ಇಲ್ಲಿನ ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮೊದಲ ಸೆಮಿಫೈನಲ್‌ನ ಎರಡನೇ ಲೆಗ್‌ನ ಹೋರಾಟದಲ್ಲಿ ಚೆನ್ನೈಯಿನ್‌ 2–4 ಗೋಲು ಗಳಿಂದ ಆತಿಥೇಯ ಎಫ್‌ಸಿ ಗೋವಾ ವಿರುದ್ಧ ಸೋತಿತು.

ಹೋದ ವಾರ ಚೆನ್ನೈನಲ್ಲಿ ನಡೆದಿದ್ದ ಮೊದಲ ಲೆಗ್‌ನ ಪೈಪೋಟಿಯಲ್ಲಿ 4–1 ಯಿಂದ ಜಯಿಸಿದ್ದ ಚೆನ್ನೈಯಿನ್‌ ತಂಡ ಗೋಲು ಗಳಿಕೆಯ ಸರಾಸರಿಯ (6–5) ಆಧಾರದಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿತು.

ಶನಿವಾರದ ಪೈಪೋಟಿಯ ಹತ್ತನೇ ನಿಮಿಷದಲ್ಲಿ ಚೆನ್ನೈಯಿನ್‌ ತಂಡದ ಲೂಸಿಯನ್ ಗೋಯಿನ್‌ ತಮ್ಮದೇ ಗೋಲುಪೆಟ್ಟಿಗೆಯಲ್ಲಿ ಚೆಂಡನ್ನು ಒದ್ದರು. ಹೀಗಾಗಿ ಗೋವಾ ಖಾತೆಗೆ ‘ಉಡುಗೊರೆ’ ಗೋಲು ಸೇರ್ಪಡೆಯಾಯಿತು.

ಮರ್ತಡಾ ಫಾಲ್‌ (21 ಮತ್ತು 83) ಹಾಗೂ ಎಡು ಬೇಡಿಯಾ ಅವರು (81) ಕಾಲ್ಚಳಕ ತೋರಿದ್ದರಿಂದ ಗೋವಾ ಪಾಳಯದಲ್ಲಿ ಗೆಲುವಿನ ಆಸೆ ಚಿಗುರೊಡೆದಿತ್ತು.

ಲಾಲಿಂಜುವಾಲ ಚಾಂಗ್ಟೆ (52) ಮತ್ತು ನೆರಿಜಸ್‌ ವಾಲಸ್ಕಿಸ್‌ (59) ದಾಖಲಿಸಿದ ಗೋಲುಗಳು ಚೆನ್ನೈಯಿನ್‌ಗೆ ವರವಾದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು