ಕೋಲ್ಕತ್ತ: ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರ ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಅವರ ಹಸ್ತಾಕ್ಷರ ಹೊಂದಿರುವ ಜೆರ್ಸಿಯನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಡೆದಿದ್ದಾರೆ.

ಮೆಸ್ಸಿ ಉಡುಗೊರೆಯಾಗಿ ನೀಡಿರುವ ಈ ಸಮವಸ್ತ್ರವು ಬಂಗಾಳ ಮತ್ತು ಕಾಲ್ಚೆಂಡಿನ ಆಟದ ಮೇಲಿನ ಅವಿನಾಭಾವ ಸಂಬಂಧವನ್ನು ಸೂಚಿಸುತ್ತದೆ ಎಂದು ಮಮತಾ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಬರೆದುಕೊಂಡಿರುವ ಮಮತಾ, 'ಬಂಗಾಳದಲ್ಲಿ ಪ್ರತಿಯೊಬ್ಬ ಫುಟ್ಬಾಲ್ ಪ್ರೇಮಿಯಂತೆ ನನ್ನ ರಕ್ತದಲ್ಲೂ ಫುಟ್ಬಾಲ್ ಅಡಗಿದೆ. ಇಂದು ಲಯೊನೆಲ್ ಮೆಸ್ಸಿ ಸಹಿ ಮಾಡಿದ ಜೆರ್ಸಿ ಪಡೆದಾಗ ಈ ಉತ್ಸಾಹವು ವಿಶೇಷ ಸ್ಥಾನವನ್ನು ಪಡೆಯಿತು' ಎಂದು ಹೇಳಿದ್ದಾರೆ.

'ಫುಟ್ಬಾಲ್ ಮೇಲಿನ ಪ್ರೀತಿಯು ನಮ್ಮೆಲ್ಲರನ್ನು ಒಗ್ಗೂಡಿಸುತ್ತದೆ. ಮೆಸ್ಸಿ ಕಾಲ್ಚೆಂಡಿನ ಆಟದ ಜಾಣ, ನಮ್ಮ ಯುಗದ ಮಾಂತ್ರಿಕ, ಬಂಗಾಳ ಮೆಚ್ಚುವ ಪ್ರತಿಭೆ ಆಗಿದ್ದಾರೆ. ಈ ಸಮವಸ್ತ್ರವು ಬಂಗಾಳ ಹಾಗೂ ಫುಟ್ಬಾಲ್ ಆಟದ ನಡುವಣ ಅವಿನಾಭಾವ ನಂಟನ್ನು ಸಂಕೇತಿಸುತ್ತದೆ' ಎಂದು ಹೇಳಿದ್ದಾರೆ.
.ವಿಶ್ಚಕಪ್ ಅರ್ಹತಾ ಪಂದ್ಯಕ್ಕೆ ಲಯೊನೆಲ್ ಮೆಸ್ಸಿ ಅಲಭ್ಯ.ಗೆಲುವಿನ ಸಂಭ್ರಮದ ವೇಳೆ ಮೆಸ್ಸಿ, ಜೋಕೊವಿಚ್ ಅನುಕರಣೆ ಮಾಡಿದ ರೋಹಿತ್ ಶರ್ಮಾ!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.