ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೆಲುವಿನ ಸಂಭ್ರಮದ ವೇಳೆ ಮೆಸ್ಸಿ, ಜೋಕೊವಿಚ್ ಅನುಕರಣೆ ಮಾಡಿದ ರೋಹಿತ್ ಶರ್ಮಾ!

Published 30 ಜೂನ್ 2024, 12:55 IST
Last Updated 30 ಜೂನ್ 2024, 12:55 IST
ಅಕ್ಷರ ಗಾತ್ರ

ಬೆಂಗಳೂರು: ಟಿ–20 ವಿಶ್ವಕಪ್ ಟ್ರೋಫಿ ಗೆದ್ದ ಬಳಿಕ ಸಂಭ್ರಮಾಚರಣೆಯಲ್ಲಿ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಅವರು, ಫುಟ್‌ಬಾಲ್ ತಾರೆ ಲಯೊನಲ್ ಮೆಸ್ಸಿ ಹಾಗೂ ಟೆನಿಸ್ ತಾರೆ ನೊವಾಕ್ ಜೋಕೊವಿಚ್ ಅವರನ್ನು ಅನುಕರಣೆ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

2022ರ ಫಿಫಾ ವಿಶ್ವಕಪ್ ಟ್ರೋಫಿ ಪಡೆದ ಬಳಿಕ ‘ರಿಕ್ ಫ್ಲೆಯರ್‌ ಸ್ಟರ್ಟ್’ ಹೋಲುವ ನಡಿಗೆಯನ್ನು ಮೆಸ್ಸಿ ಮಾಡಿದ್ದರು. ಬ್ರಿಡ್ಜ್‌ಟೌನ್‌ನ ಕೆನ್ಸಿಂಗ್ಟನ್‌ ಓವಲ್‌ನಲ್ಲಿ ಫೈನಲ್ ಗೆಲುವಿನ ಬಳಿಕ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಂದ ಟ್ರೋಫಿ ಸ್ವೀಕರಿಸಲು ತೆರಳುವ ವೇಳೆ ಇದೇ ನಡಿಗೆಯನ್ನು ರೋಹಿತ್ ಶರ್ಮಾ ಅನುಕರಿಸಿದ್ದಾರೆ.

ರೋಹಿತ್ ಅವರ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಲಯೊನಲ್ ಮೆಸ್ಸಿ ಅವರ ಆ ವಿಡಿಯೊದೊಂದಿಗೆ ಅಭಿಮಾನಿಗಳು ಶೇರ್‌ ಮಾಡುತ್ತಿದ್ದಾರೆ.

ಟ್ರೋಫಿ ಸ್ವೀಕರಿಸಲು ಹೀಗೆ ತೆರಳಬೇಕು ಎಂದು ಕುಲದೀಪ್ ಯಾದವ್‌ ಅವರು ತೋರಿಸಿಕೊಡುವ ಇನ್ನೊಂದು ವಿಡಿಯೊ ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗುತ್ತಿದೆ.

ಫಿಫಾ ವಿಶ್ವಕಪ್‌ನ ಇನ್‌ಸ್ಟಾಗ್ರಾಮ್‌ ತಾಣದಲ್ಲಿ ಇವರಿಬ್ಬರ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ.

ಗೆದ್ದ ಬಳಿಕ ಪಿಚ್‌ನ ಮಣ್ಣು ತಿನ್ನುವ ರೋಹಿತ್ ಶರ್ಮಾ ಅವರು ಮಣ್ಣು ತಿನ್ನುವ ಚಿತ್ರವೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಹಿಂದೆ ಟೆನಿಸ್ ತಾರೆ ನೊವಾಕ್ ಜೋಕೊವಿಚ್ ಕೂಡ ಇದೇ ರೀತಿ ಮೈದಾನದ ಮಣ್ಣನ್ನು ತಿಂದಿದ್ದರು.

ರೋಹಿತ್ ಶರ್ಮಾ ಹಾಗೂ ಜೋಕೊವಿಚ್ ಮಣ್ಣು ತಿನ್ನುತ್ತಿರುವ ಚಿತ್ರವ‌ನ್ನು ವಿಂಬಲ್ಡನ್‌ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT