ಬೆಂಗಳೂರು: ಮೊಹಾಲಿಯ ಮಿನರ್ವ ಪಬ್ಲಿಕ್ ಸ್ಕೂಲ್ (ಸಿಐಎಸ್ಸಿಇ) ತಂಡವು 64ನೇ ಆವೃತ್ತಿಯ ಸುಬ್ರತೊ ಕಪ್ ಸಬ್ ಜೂನಿಯರ್ ಬಾಲಕರ (15 ವರ್ಷದೊಳಗಿನ) ಅಂತರರಾಷ್ಟ್ರೀಯ ಫುಟ್ಬಾಲ್ ಟೂರ್ನಿಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಯಲಹಂಕದ ವಾಯುನೆಲೆಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಮಿನರ್ವ ತಂಡವು 6–0 ಗೋಲುಗಳ ಅಂತರದಿಂದ ವಿದ್ಯಾಚಲ್ ಇಂಟರ್ನ್ಯಾಷನಲ್ ಸ್ಕೂಲ್ (ಬಿಹಾರ) ತಂಡವನ್ನು ಸುಲಭವಾಗಿ ಮಣಿಸಿತು.

ಮಿನರ್ವ ಪರ ಮಹೇಶ್ (4ನೇ ಮತ್ತು 50+1ನೇ ನಿಮಿಷ), ಲೆಟ್ಗೌಹಾವ್ ಕಿಪ್ಜನ್ (19ನೇ ಮತ್ತು 35ನೇ) ತಲಾ ಎರಡು ಗೋಲು ಗಳಿಸಿದರು. ಬಿಕ್ಸನ್ (37ನೇ) ಮತ್ತು ರಿಮೋಸನ್ (42ನೇ) ತಲಾ ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು.

ಚಾಂಪಿಯನ್ ಮಿನರ್ವ ತಂಡವು ಟ್ರೋಫಿಯೊಂದಿಗೆ ₹4 ಲಕ್ಷ ಬಹುಮಾನವನ್ನು ತನ್ನದಾಗಿಸಿಕೊಂಡಿತು. ರನ್ನರ್ ಅಪ್ ವಿದ್ಯಾಚಲ್ ತಂಡ ₹ 2 ಲಕ್ಷ ಬಹುಮಾನ ಪಡೆಯತು.

ಭಾರತ ಹಾಕಿ ತಂಡದ ಮಾಜಿ ಗೋಲ್ಕೀಪರ್ ಪಿ.ಆರ್. ಶ್ರೀಜೇಶ್, ಏರ್ ಮಾರ್ಷಲ್ ತೇಜಿಂದರ್ ಸಿಂಗ್ ಅವರು ವಿಜೇತ ತಂಡಕ್ಕೆ ಪ್ರಶಸ್ತಿ ಪ್ರದಾನ ಮಾಡಿದರು.

ಉತ್ತಮ ಆಟಗಾರ ಲೆಟ್ಗೌಹಾವ್ ಕಿಪ್ಜನ್ (ಮಿನರ್ವ), ಉತ್ತಮ ಕೋಚ್ ಕರಣ್ ಕುಮಾರ್ (ವಿದ್ಯಾಚಲ್), ಉತ್ತಮ ಗೋಲ್ಕೀಪರ್ ಗುರ್ಜಿತ್ ವೀರ (ಮಿನರ್ವ) ಗೌರವಕ್ಕೆ ಪಾತ್ರರಾದರು. ನವೋದಯ ವಿದ್ಯಾಲಯ ಸಮಿತಿಯು ಫೇರ್ ಪ್ಲೇ ಅವಾರ್ಡ್, ವಿದ್ಯಾಚಲ್ ಇಟರ್ನ್ಯಾಷನಲ್ ಸ್ಕೂಲ್ ತಂಡವು ಉತ್ತಮ ಶಾಲೆ ಗೌರವಕ್ಕೆ ಪಾತ್ರವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.