ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್: ನೇಮರ್ ಕಾಲ್ಚಳಕ, ಜಪಾನ್ ವಿರುದ್ಧ ಬ್ರೆಜಿಲ್ ತಂಡ ಜಯಭೇರಿ

Last Updated 6 ಜೂನ್ 2022, 19:31 IST
ಅಕ್ಷರ ಗಾತ್ರ

ಟೋಕಿಯೊ: ನೇಮರ್ ಪೆನಾಲ್ಟಿಯಲ್ಲಿ ಗಳಿಸಿದ ಗೋಲಿನ ಬಲದಿಂದ ಬಲದಿಂದ ಬ್ರೆಜಿಲ್ ತಂಡವು ಇಲ್ಲಿ ನಡೆದ ಸ್ನೇಹಪರ ಫುಟ್‌ಬಾಲ್ ಪಂದ್ಯದಲ್ಲಿ ಜಪಾನ್ ತಂಡಕ್ಕೆ ಸೋಲುಣಿಸಿತು.

ಸೋಮವಾರ ನಡೆದ ಹಣಾಹಣಿಯಲ್ಲಿ ಬ್ರೆಜಿಲ್ ಪರ ಒಟ್ಟಾರೆ 74ನೇ ಗೋಲು ಗಳಿಸಿದ ನೇಮರ್ 1–0 ಅಂತರದ ಜಯಕ್ಕೆ ಕಾರಣರಾದರು. ಪಂದ್ಯದ 77ನೇ ನಿಮಿಷದಲ್ಲಿ ಅವರು ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು.

ಬ್ರೆಜಿಲ್ ಪರ ಅತಿ ಹೆಚ್ಚು ಗೋಲು ಗಳಿಸಿದ ದಿಗ್ಗಜ ಪೆಲೆ (77) ದಾಖಲೆ ಸರಿಗಟ್ಟಲು ನೇಮರ್ ಅವರಿಗೆ ಇನ್ನು ಕೇವಲ ಮೂರು ಗೋಲು ಬೇಕಾಗಿದೆ.

ವಾರದ ಹಿಂದೆ ಸೋಲ್‌ನಲ್ಲಿ ನಡೆದ ಪಂದ್ಯದಲ್ಲಿ ಬ್ರೆಜಿಲ್‌ 5–1ರಿಂದ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿತ್ತು. ಅದೇ ಲಯವನ್ನು ಇಲ್ಲಿಯೂ ಮುಂದುವರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT