ಮಂಗಳವಾರ, ಜನವರಿ 28, 2020
17 °C

ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿ: ಒಡಿಶಾಕ್ಕೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ: ಒಡಿಶಾ ತಂಡ, ಶನಿವಾರ ನಡೆದ ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ತಂಡವನ್ನು 2–0 ಗೋಲುಗಳಿಂದ ಸೋಲಿಸಿತು. ಎರಡೂ ಗೋಲುಗಳು ಉತ್ತರಾರ್ಧದಲ್ಲಿ ಸ್ಪೇನ್‌ನ ‘ಆಮದು’ ಆಟಗಾರದಿಂದ ದಾಖಲಾದವು.

ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದ 47ನೇ ನಿಮಿಷ ಅರಿಡೇನ್‌ ಸಂಟಾನ ಒಡಿಶಾಕ್ಕೆ ಮುನ್ನಡೆ ಒದಗಿಸಿದರು. ಕ್ಸಿಸ್ಕೊ ಹರ್ನಾಂಡೆಸ್‌ 74ನೇ ನಿಮಿಷ ಅಂತರವನ್ನು ಹೆಚ್ಚಿಸಿದರು.

ಒಡಿಶಾ ತಂಡ ಈ ಗೆಲುವಿನಿಂದ ಒಟ್ಟು 18 ಪಾಯಿಂಟ್‌ಗಳೊಡನೆ ಲೀಗ್‌ನಲ್ಲಿ ನಾಲ್ಕನೇ ಸ್ಥಾನಕ್ಕೇರಿತು. ಮುಂಬೈಸಿಟಿ ಐದನೇ ಸ್ಥಾನಕ್ಕಿಳಿಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು