ಮಂಗಳವಾರ, ಮೇ 24, 2022
25 °C

ಮಹಿಳಾ ಫುಟ್‌ಬಾಲ್‌: ಪರಿಕ್ರಮ ಎಫ್‌ಸಿ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉತ್ತಮ ಆಟವಾಡಿದ ಪರಿಕ್ರಮ ಎಫ್‌ಸಿ ತಂಡವು ರಾಜ್ಯ ಫುಟ್‌ಬಾಲ್ ಸಂಸ್ಥೆಯ ಮಹಿಳೆಯರ ಸೂಪರ್ ಡಿವಿಷನ್‌ ಲೀಗ್‌ನ ಪಂದ್ಯದಲ್ಲಿ 3–0ಯಿಂದ ಸ್ಲ್ಯಾಮ್‌ಜರ್ಸ್‌ ಬೆಳಗಾವಿ ತಂಡವನ್ನು ಮಣಿಸಿತು.

ವಿಜೇತ ತಂಡದ ಪರ ಶೋಬನಾ ಸೆಲ್ವಂ (7ನೇ ನಿಮಿಷ), ನಾದಿಯಾ ನೈಟ್ (13ನೇ ನಿಮಿಷ) ಹಾಗೂ ವೈಷ್ಣವಿ ಧರ್ಮರಾಜ್‌ (24ನೇ ನಿಮಿಷ) ಗೋಲು ದಾಖಲಿಸಿದರು.

ಮತ್ತೊಂದು ಪಂದ್ಯದಲ್ಲಿ ಅಮೂಲ್ಯ (87 ಮತ್ತು 90ನೇ ನಿಮಿಷ) ಗಳಿಸಿದ ಎರಡು ಗೋಲುಗಳ ಬೆಂಗಳೂರು ಯುನೈಟೆಡ್‌ ಎಫ್‌ಸಿ ತಂಡವು 2–0ಯಿಂದ ರೆಬೆಲ್ಸ್ ವಿಮೆನ್ಸ್ ಎಫ್‌ಸಿ ತಂಡವನ್ನು ಪರಾಭವಗೊಳಿಸಿತು.

ಬುಧವಾರ ನಡೆಯುವ ಮೊದಲ ಪಂದ್ಯದಲ್ಲಿ ಮಿಸಾಕ ಯುನೈಟೆಡ್‌– ಬೆಂಗಳೂರು ಬ್ರೇವ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮತ್ತೊಂದು ಪಂದ್ಯದಲ್ಲಿ ಕಿಕ್‌ಸ್ಟಾರ್ಸ್‌ ಎಫ್‌ಸಿ– ಬಿರ್ ಸಾಕರ್ ಗೆಲಾಕ್ಸಿ ಸೆಣಸಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು