ಫರೊ, ಪೋರ್ಚುಗಲ್: ತಮ್ಮ ವೃತ್ತಿಜೀವನದ 58ನೇ ಹ್ಯಾಟ್ರಿಕ್ ದಾಖಲಿಸಿದ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಪೋರ್ಚುಗಲ್ ತಂಡಕ್ಕೆ ಭರ್ಜರಿ ಜಯ ದೊರಕಿಸಿಕೊಟ್ಟರು. ಮಂಗಳವಾರ ರಾತ್ರಿ ನಡೆದ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಆ ತಂಡವು 5–0ಯಿಂದ ಲೂಕ್ಸೆಂಬರ್ಗ್ ತಂಡವನ್ನು ಪರಾಭವಗೊಳಿಸಿತು.

ಇಲ್ಲಿ ನಡೆದ ‘ಎ’ ಗುಂಪಿನ ಪಂದ್ಯದ ಮೂಲಕ ರೊನಾಲ್ಡೊ ಒಟ್ಟು 115 ಅಂತರರಾಷ್ಟ್ರೀಯ ಗೋಲುಗಳ ಸರದಾರನಾದರು. 182ನೇ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದರು. ರೊನಾಲ್ಡೊ 8 ಮತ್ತು 13ನೇ ನಿಮಿಷಗಳಲ್ಲಿ ಪೆನಾಲ್ಟಿ ಅವಕಾಶಗಳನ್ನು ಗೋಲಾಗಿಸಿದರೆ, 87ನೇ ನಿಮಿಷದಲ್ಲಿ ಫೀಲ್ಡ್ ಗೋಲು ದಾಖಲಿಸಿದರು. ತಂಡದ ಪರ ಇನ್ನೆರಡು ಗೋಲುಗಳು ಬ್ರೂನಿ ಮಿಗ್ವೆಲ್ ಫರ್ನಾಂಡೀಸ್ (18ನೇ ನಿ.) ಮತ್ತು ಜೋವಾ ಪಲ್ಹಿನಾ ಗೊಂಜಾಲೆಜ್ (69ನೇ ನಿ.) ಮೂಲಕ ಬಂದವು.

ಡೆನ್ಮಾರ್ಕ್‌ಗೆ ಅರ್ಹತೆ: ‘ಎಫ್‘ ಗುಂಪಿನ ಪಂದ್ಯದಲ್ಲಿ ಅಸ್ಟ್ರಿಯಾ ವಿರುದ್ಧ 1–0ಯಿಂದ ಜಯಿಸಿದ ಡೆನ್ಮಾರ್ಕ್ ವಿಶ್ವಕಪ್‌ಗೆ ಅರ್ಹತೆ ಗಳಿಸಿದ ಯೂರೋಪಿನ ಎರಡನೇ ತಂಡ ಎನಿಸಿಕೊಂಡಿತು. ತಂಡದ ಪರ ಜೋಕಿಮ್ ಮೆಹಲೆ ಕಾಲ್ಚಳಕ ತೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.