ತೆರಿಗೆ ವಂಚನೆ: ರೊನಾಲ್ಡೊಗೆ ₹152 ಕೋಟಿ ದಂಡ

7

ತೆರಿಗೆ ವಂಚನೆ: ರೊನಾಲ್ಡೊಗೆ ₹152 ಕೋಟಿ ದಂಡ

Published:
Updated:
Prajavani

ಮ್ಯಾಡ್ರಿಡ್‌: ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋರ್ಚುಗಲ್‌ನ ಫುಟ್‌ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊಗೆ ಸ್ಪೇನ್‌ನ ನ್ಯಾಯಾಲಯ ₹152 ಕೋಟಿ ದಂಡ ವಿಧಿಸಿದೆ.

ಮಂಗಳವಾರ ಸುಮಾರು 45 ನಿಮಿಷ ನಡೆದ ವಿಚಾರಣೆ ನಡೆಯಿತು. ಈ ವೇಳೆ ಖುದ್ದು ಹಾಜರಿದ್ದ ರೊನಾಲ್ಡೊ, ದಂಡದ ಮೊತ್ತ ‍ಪಾವತಿಸಲು ಒಪ್ಪಿದರು. ಈ ಸಂಬಂಧ ಒಪ್ಪಂದಕ್ಕೂ ಸಹಿ ಹಾಕಿದರು. ಇದೇ ಮೊದಲ ಸಲ ತಪ್ಪು ಮಾಡಿರುವ ಕಾರಣ ರೊನಾಲ್ಡೊ ಮೇಲೆ ಹೇರಿದ್ದ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ನ್ಯಾಯಾಲಯ ರದ್ದು ಮಾಡಿತು.

ಕ್ರಿಸ್ಟಿಯಾನೊ ಅವರ ಪ್ರತಿಕ್ರಿಯೆ ಪಡೆಯಲು ನ್ಯಾಯಾಲದ ಹೊರಗೆ 500 ಕ್ಕೂ ಹೆಚ್ಚು ಮಂದಿ ಪತ್ರಕರ್ತರು ಕಾದು ಕುಳಿತಿದ್ದರು ಎಂದು ನ್ಯೂಯಾರ್ಕ್‌ ಪೋಸ್ಟ್‌ ಪತ್ರಿಕೆ ವರದಿ ಮಾಡಿದೆ.

ರೊನಾಲ್ಡೊ ಅವರು 2010ರಿಂದ 2014ರವರೆಗೆ ಸ್ಪೇನ್‌ನ ರಿಯಲ್‌ ಮ್ಯಾಡ್ರಿಡ್‌ ಕ್ಲಬ್‌ ಪರ ಆಡಿದ್ದರು. ಈ ಅವಧಿಯಲ್ಲಿ  ತೆರಿಗೆ ಕಟ್ಟಿರಲಿಲ್ಲ. ಈ ಸಂಬಂಧ 2017ರಲ್ಲಿ ಅವರ ವಿರುದ್ಧ ದೂರು ದಾಖಲಾಗಿತ್ತು.

33 ವರ್ಷದ ಆಟಗಾರ, ಹೋದ ವರ್ಷ ರಿಯಲ್‌ ಮ್ಯಾಡ್ರಿಡ್‌ ತೊರೆದು ಯುವೆಂಟಸ್‌ ಕ್ಲಬ್‌ ಸೇರಿದ್ದರು. ಫೋಬ್ಸ್‌ ಬಿಡುಗಡೆ ಮಾಡಿದ್ದ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿದ್ದರು. ಅವರು ವಾರ್ಷಿಕ ₹769 ಕೋಟಿ ಆದಾಯ  ಗಳಿಸುತ್ತಾರೆ ಎಂದು ಫೋರ್ಬ್‌ ತಿಳಿಸಿತ್ತು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !