ಮಂಗಳವಾರ, ಜೂನ್ 28, 2022
21 °C
ಸೆಮಿಯಲ್ಲಿ ವಿಲ್ಲಾರಿಯಲ್ ಎದುರಾಳಿ

ಯುಇಎಫ್‌ಎ ಚಾಂಪಿಯನ್ಸ್ ಲೀಗ್ ಫುಟ್‌ಬಾಲ್‌: ಲಿವರ್‌ಪೂಲ್‌ಗೆ ಸಲಾ ಮೇಲೆ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಿಡ್‌ಫೀಲ್ಡರ್‌ ಮೊಹಮ್ಮದ್‌ ಸಲಾ ಮೇಲೆ ಲಿವರ್‌ಪೂಲ್ ಎಫ್‌ಸಿ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದು, ವಿಲ್ಲಾರಿಯಲ್ ಎದುರಿನ ಪಂದ್ಯದಲ್ಲಿ ಅವರು ಮಿಂಚುವ ಸಾಧ್ಯತೆಯಿದೆ ಎಂದು ಇಂಗ್ಲೆಂಡ್‌ ತಂಡದ ಮಾಜಿ ಆಟಗಾರ ಡೇವಿಡ್ ಜೇಮ್ಸ್ ಹೇಳಿದ್ದಾರೆ.

ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಮಂಗಳವಾರ ವರ್ಚುವಲ್ ಆಗಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.

ಲಿವರ್‌ಪೂಲ್ ತಂಡವು ಯುಇಎಫ್ಎ ಚಾಂಪಿಯನ್ಸ್ ಲೀಗ್‌ನ ಸೆಮಿಫೈನಲ್‌ನ ಮೊದಲ ಲೆಗ್‌ನಲ್ಲಿ ವಿಲ್ಲಾರಿಯಲ್ ತಂಡವನ್ನು ಎದುರಿಸಲಿದೆ. ಲಿವರ್‌ಪೂಲ್‌ನ ಆ್ಯನ್‌ಫೀಲ್ಡ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಿಗದಿಯಾಗಿದೆ.

‘ಮೊಹಮ್ಮದ್‌ ಸಲಾ ಲಿವರ್‌ಪೂಲ್‌ನ ಆಸ್ತಿ. ಟೂರ್ನಿಯುದ್ದಕ್ಕೂ ಉತ್ತಮ ಸಾಮರ್ಥ್ಯ ತೋರುತ್ತ ಬಂದಿದ್ದಾರೆ. ಸಹಜವಾಗಿಯೇ ಅವರು ತಂಡವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಭರವಸೆ ಹೆಚ್ಚಿದೆ‘ ಎಂದು ಡೇವಿಡ್‌ ಹೇಳಿದರು.

ಗೋಲ್‌ಕೀಪರ್ ಆಗಿದ್ದ ಡೇವಿಡ್‌ ಲಿವರ್‌ಪೂಲ್ ಮತ್ತು ಮ್ಯಾಂಚೆಸ್ಟರ್‌ ಸಿಟಿ ಕ್ಲಬ್‌ಗಳ ಪರವೂ ಆಡಿದ್ದಾರೆ.

ಈಜಿಪ್ಟ್‌ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಸಲಾ, 2021–22ರ ಋತುವಿನಲ್ಲಿ ಲಿವರ್‌ಪೂಲ್ ಪರ 31 ಪಂದ್ಯಗಳನ್ನು ಆಡಿದ್ದು 22 ಗೋಲುಗಳನ್ನು ಗಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು