ಗುರುವಾರ , ಏಪ್ರಿಲ್ 9, 2020
19 °C

ಹಿರಿಯ ಫುಟ್‌ಬಾಲ್ ಆಟಗಾರ ಪುಟ್ಟಸ್ವಾಮಿ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹಿರಿಯ ಫುಟ್‌ ಬಾಲ್ ಆಟಗಾರ ಸಿ. ಪುಟ್ಟಸ್ವಾಮಿ (76) ನಿಧನರಾದರು.  ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಮತ್ತು  ಮೊಮ್ಮಗ ಇದ್ದಾರೆ.

ಕರ್ನಾಟಕ ಫುಟ್‌ಬಾಲ್ ತಂಡದ ಹಲವು ಪ್ರಶಸ್ತಿ ಸಾಧನೆಗಳಲ್ಲಿ ರೈಟ್‌ಔಟ್‌ ಆಟಗಾರರಾಗಿದ್ದ ಪುಟ್ಟಸ್ವಾಮಿ ಅವರ ಪಾತ್ರ ಮಹತ್ವದ್ದಾಗಿತ್ತು.  ಅವರು ಅಖಿಲ ಭಾರತ ಮಟ್ಟದ ಟೂರ್ನಿಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಡಿಸಿಎಂ, ಡುರಾಂಡ್ ಕಪ್, ರೋವರ್ಸ್ ಕಪ್, ವಿಠ್ಠಲ್ ಟ್ರೋಫಿ, ನಿಜಾಮ್ ಗೋಲ್ಡ್ ಕಪ್, ಸ್ಟಾಫರ್ಡ್ ಚಾಲೆಂಜ್ ಕಪ್ ಸೇರಿ ದಂತೆ ಹಲವು ಟೂರ್ನಿಗಳಲ್ಲಿ ಆಡಿದ್ದರು.

ವಿನಾಯಕ ಫುಟ್‌ಬಾಲ್ ಕ್ಲಬ್‌ ಸಂಸ್ಥಾಪಕರಾಗಿದ್ದರು. ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆಯ ಸದಸ್ಯರಾಗಿ ದ್ದರು. ಅಂತಿಮ ಸಂಸ್ಕಾರವನ್ನು ಮಂಗಳವಾರ ಹೆಬ್ಬಾಳದ ವಿದ್ಯುತ್ ಚಿತಾಗಾರದಲ್ಲಿ ನೆರವೇರಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು