ನವದೆಹಲಿ:ಎಐಎಫ್‌ಎಫ್ ಚುನಾವಣೆಯಲ್ಲಿ ‘ಉನ್ನತಮಟ್ಟದ ರಾಜಜೀಯ ಹಸ್ತಕ್ಷೇಪ‘ ನಡೆದಿದ್ದು ಆಘಾತಕಾರಿ ಎಂದು ಭಾರತ ಫುಟ್‌ಬಾಲ್ ತಂಡದ ಮಾಜಿ ನಾಯಕ ಬೈಚುಂಗ್ ಭುಟಿಯಾ ಹೇಳಿದ್ದಾರೆ.

ಶುಕ್ರವಾರ ನಡೆದ ಎಐಎಫ್‌ಎಫ್ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಭುಟಿಯಾ ಅವರು, ಬಿಜೆಪಿ ನಾಯಕ ಕಲ್ಯಾಣ್ ಚೌಬೆ ಎದುರು ಸೋತಿದ್ದರು.

‘ಎದುರಾಳಿಗೆ (ಕಲ್ಯಾಣ್ ಚೌಬೆ) ಗೆಲುವಿನ ವಿಶ್ವಾಸವಿದ್ದಿದ್ದರೆ, ಕೇಂದ್ರದ ಪ್ರಭಾವಿ ಸಚಿವರೊಬ್ಬರು, ಮತದಾರರು ತಂಗಿದ್ದ ಹೊಟೇಲ್‌ಗೆ ಯಾಕೆ ಭೇಟಿಕೊಡಬೇಕಿತ್ತು‘ ಎಂದು ಭುಟಿಯಾ ಪ್ರಶ್ನಿಸಿದ್ದಾರೆ. ಆದರೆ ಕೇಂದ್ರ ಸಚಿವರ ಹೆಸರನ್ನು ಅವರು ಉಲ್ಲೇಖಿಸಿಲ್ಲ.

ಶಾಜಿ ಪ್ರಧಾನ ಕಾರ್ಯದರ್ಶಿ: ದೆಹಲಿ ಫುಟ್‌ಬಾಲ್ ಸಂಸ್ಥೆಯ(ಫುಟ್‌ಬಾಲ್ ಡೆಲ್ಲಿ) ಅಧ್ಯಕ್ಷ ಶಾಜಿ ಪ್ರಭಾಕರನ್ ಅವರು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್) ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.