ಮ್ಯಾಡ್ರಿಡ್: ಸ್ಪೇನ್ ದೇಶದ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಅವರು ತಮ್ಮ ದೇಶದ ಫುಟ್‌ಬಾಲ್ ಫೆಡರೇಷನ್ ಅಧ್ಯಕ್ಷ ಲೂಯಿಸ್ ರುಬೆಲ್ಸ್ ವಿರುದ್ಧ ಕಿಡಿ ಕಾರಿದ್ದಾರೆ.

ಈಚೆಗೆ ಫಿಫಾ ಮಹಿಳಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದ ಸಂದರ್ಭದಲ್ಲಿ ಸ್ಪೇನ್ ತಂಡದ ತಾರಾ ಆಟಗಾರ್ತಿ ಜೆನಿ ಹರ್ಮೊಸೊ ಅವರ ತುಟಿಗೆ ಲೂಯಿಸ್ ಚುಂಬಿಸಿದ್ದರು.

ನಂತರ ತಮ್ಮ ದೇಶದ ತಂಡವು ಚಾಂಪಿಯನ್ ಆದ ಸಂತಸದ ಭರದಲ್ಲಿ ಈ ರೀತಿಯಾಗಿದೆ. ತಮಗೆ ಯಾವುದೇ ಕೆಟ್ಟ ಉದ್ದೇಶ ಇರಲಿಲ್ಲ ಎಂದಿರುವ ಲೂಯಿಸ್, ಕ್ಷಮೆ ಯಾಚಿಸಿದ್ದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ, ‘ಲೂಯಿಸ್ ನಡವಳಿಕೆಯು ಎಂದಿಗೂ ಒಪ್ಪತಕ್ಕದುಲ್ಲ. ಅವರು ಕ್ಷಮೆ ಕೇಳಿದರಷ್ಟೇ ಸಾಕಾಗದು. ಇದೊಂದು ಪಾಠವಾಗಬೇಕು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.