ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಫುಟ್‌ಬಾಲ್‌ ತಂಡದ ಮುಖ್ಯ ಕೋಚ್‌ ಇಗೊರ್‌ ಸ್ಟಿಮ್ಯಾಕ್‌ ಒಪ್ಪಂದ ವಿಸ್ತರಣೆ

Last Updated 18 ಸೆಪ್ಟೆಂಬರ್ 2022, 14:15 IST
ಅಕ್ಷರ ಗಾತ್ರ

ಕೋಲ್ಕತ್ತ: ಭಾರತ ಫುಟ್‌ಬಾಲ್‌ ತಂಡದ ಮುಖ್ಯ ಕೋಚ್‌ ಇಗೊರ್‌ ಸ್ಟಿಮ್ಯಾಕ್‌ ಅವರೊಂದಿಗಿನ ಒಪ್ಪಂದವನ್ನು 2023ರ ಜುಲೈವರೆಗೆ ಮುಂದುವರಿಸಲು ಎಐಎಫ್‌ಎಫ್‌ ತಾಂತ್ರಿಕ ಸಮಿತಿ ನಿರ್ಧರಿಸಿದೆ.

ದಿಗ್ಗಜ ಆಟಗಾರ ಐ.ಎಂ ವಿಜಯನ್‌ ನೇತೃತ್ವದ ತಾಂತ್ರಿಕ ಸಮಿತಿ ಭಾನುವಾರ ಸಭೆ ನಡೆಸಿ, ಸ್ಟಿಮ್ಯಾಕ್‌ ಅವರನ್ನು ಮುಂದುವರಿಸುವ ನಿರ್ಧಾರ ತೆಗೆದುಕೊಂಡಿತು.

‘ಎಎಫ್‌ಸಿ ಏಷ್ಯಾ ಕಪ್‌ 2023ರ ಜುಲೈನಲ್ಲಿ ನಡೆಯಲಿದ್ದು, ಅಲ್ಲಿಯವರೆಗೆ ಸ್ಟಿಮ್ಯಾಕ್‌ ಅವರನ್ನು ಕೋಚ್‌ ಆಗಿ ಮುಂದುವರಿಸಲು ತೀರ್ಮಾನಿಸಲಾಯಿತು’ ಎಂದು ಎಐಎಫ್‌ಎಫ್‌ ಪ್ರಕಟಣೆ ತಿಳಿಸಿದೆ.

ಕ್ರೊವೇಷ್ಯದ ಸ್ಟಿಮ್ಯಾಕ್‌ ಅವರು 2019ರ ಮೇ ತಿಂಗಳಲ್ಲಿ ರಾಷ್ಟ್ರೀಯ ತಂಡದ ಕೋಚ್‌ ಆಗಿ ನೇಮಕಗೊಂಡಿದ್ದರು. ಆ ಬಳಿಕ ಮೂರು ಸಲ ಅವರ ಒಪ್ಪಂದದ ಅವಧಿ ವಿಸ್ತರಿಸಲಾಗಿದೆ. 2021 ರಲ್ಲಿ ಎರಡು ಸಲ ಅವರೊಂದಿಗಿನ ಒಪ್ಪಂದವನ್ನು ವಿಸ್ತರಿಸಲಾಗಿತ್ತು.

ಏಷ್ಯಾ ಕಪ್‌ ಟೂರ್ನಿ ಮುಂದಿನ ವರ್ಷ ಜೂನ್‌ 16 ರಿಂದ ಜುಲೈ 16ರ ವರೆಗೆ ನಡೆಯಲಿದೆ. ಈ ಟೂರ್ನಿಯ ತಾಣ ಇನ್ನೂ ನಿರ್ಧಾರವಾಗಿಲ್ಲ. ಟೂರ್ನಿಗೆ ಆತಿಥ್ಯ ವಹಿಸಬೇಕಿದ್ದ ಚೀನಾ, ಕೋವಿಡ್‌ ಕಾರಣದಿಂದಾಗಿ ಹಿಂದೆ ಸರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT