ಬೆಂಗಳೂರು: ಜೊತಿನ್ ಸಿಂಗ್ ಅವರ ಮಿಂಚಿನ ಆಟದ ಬಲದಿಂದ ಎಎಸ್‌ಸಿ ಆ್ಯಂಡ್ ಸೆಂಟರ್ ಎಫ್‌ಸಿ ತಂಡ ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ಸೂಪರ್ ಡಿವಿಷನ್ ಲೀಗ್ ಪಂದ್ಯದಲ್ಲಿ ಗೆದ್ದಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪೈಪೋಟಿಯಲ್ಲಿ ಎಎಸ್‌ಸಿ 2–1 ಗೋಲುಗಳಿಂದ ಜವಾಹರ ಯೂನಿಯನ್ ಎಫ್‌ಸಿ ತಂಡವನ್ನು ಸೋಲಿಸಿತು.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಎಎಸ್‌ಸಿ ತಂಡ ನಾಲ್ಕನೇ ನಿಮಿಷದಲ್ಲಿ ಖಾತೆ ತೆರೆಯಿತು. ಜೊತಿನ್ ಕಾಲ್ಚಳಕ ತೋರಿದರು. ನಂತರ ಉಭಯ ತಂಡಗಳು ಸಮಬಲದ ಪೈಪೋಟಿ ನಡೆಸಿದವು. ಎಎಸ್‌ಸಿ ತಂಡ 35ನೇ ನಿಮಿಷದಲ್ಲಿ ಮುನ್ನಡೆ ಹೆಚ್ಚಿಸಿಕೊಂಡಿತು. ಜೊತಿನ್ ಮತ್ತೊಮ್ಮೆ ಮೋಡಿ ಮಾಡಿದರು.

ದ್ವಿತೀಯಾರ್ಧದಲ್ಲಿ ಜವಾಹರ ಯೂನಿಯನ್ ತಂಡದ ಆಟ ರಂಗೇರಿತು. 49ನೇ ನಿಮಿಷದಲ್ಲಿ ಜೊನಾಥನ್ ಗೋಲು ಬಾರಿಸಿ ಹಿನ್ನಡೆಯನ್ನು 1–2ಕ್ಕೆ ತಗ್ಗಿಸಿದರು. ನಂತರ ಎಎಸ್‌ಸಿ ತಂಡ ರಕ್ಷಣಾ ವಿಭಾಗದಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರಿ ಗೆಲುವಿನ ತೋರಣ ಕಟ್ಟಿತು.

‘ಎ’ ಡಿವಿಷನ್ ಲೀಗ್ ಪಂದ್ಯದಲ್ಲಿ ಆರ್.ಡಬ್ಲ್ಯು.ಎಫ್. ಎಫ್‌ಸಿ ತಂಡ ಜಯದ ಸಿಹಿ ಸವಿಯಿತು.

ಆರ್.ಡಬ್ಲ್ಯು.ಎಫ್ 1–0 ಗೋಲಿನಿಂದ ಆರ್.ಎಸ್.ಸ್ಪೋರ್ಟ್ಸ್ ಎಫ್‌ಸಿ ತಂಡವನ್ನು ಪರಾಭವಗೊಳಿಸಿತು.

45ನೇ ನಿಮಿಷದಲ್ಲಿ ಗೋಲು ಬಾರಿಸಿದ ಪ್ರಕಾಶ್, ಆರ್.ಡಬ್ಲ್ಯು.ಎಫ್ ತಂಡದ ಗೆಲುವಿನ ರೂವಾರಿ ಎನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.