ಗುರುವಾರ , ಸೆಪ್ಟೆಂಬರ್ 23, 2021
25 °C

ಲಾಲಿಗಾ: ವಲೆನ್ಸಿಯಾಗೆ ‘ಮೊದಲ’ ಜಯ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ವಲೆನ್ಸಿಯ, ಸ್ಪೇನ್‌: ಪೆನಾಲ್ಟಿ ಕಾರ್ನರ್‌ನಲ್ಲಿ ಮಿಡ್‌ಫೀಲ್ಡರ್ ಕಾರ್ಲೋಸ್ ಸಾಲೆರ್ ಗಳಿಸಿದ ಗೋಲಿನ ನೆರವಿನಿಮದ ವಲೆನ್ಸಿಯಾ ತಂಡಕ್ಕೆ ಲಾಲಿಗಾ ಫುಟ್‌ಬಾಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ಗೆಲುವು ತಂದುಕೊಟ್ಟಿತು. ಶನಿವಾರ ನಡೆದ ಪಂದ್ಯದಲ್ಲಿ ಗೆಟಾಫಿ ತಂಡವನ್ನು ವಲೆನ್ಸಿಯಾ 1–0ಯಿಂದ ಮಣಿಸಿತು.

ಆತಿಥೇಯ ತಂಡಕ್ಕೆ ಮೂರನೇ ನಿಮಿಷದಲ್ಲೇ ಆಘಾತ ಕಾದಿತ್ತು. ಡಿಫೆಂಡರ್ ಹ್ಯೂಗೊ ಗುಲಾಮೊನ್ ಅವರು ರೆಡ್ ಕಾರ್ಡ್‌ ಪಡೆದು ಹೊರನಡೆದಿದ್ದರು. ಎದುರಾಳಿ ತಂಡದ ಮಿಡ್‌ಫೀಲ್ಡರ್ ನೆಮಾಂಜ ಮಕ್ಸಿಮೊವಿಚ್ ಅವರನ್ನು ನೆಲಕ್ಕೆ ಬೀಳಿಸಿದ್ದಕ್ಕಾಗಿ ಅವರನ್ನು ಹೊರಗೆ ಕಳುಹಿಸಲಾಗಿತ್ತು. ಹೀಗಾಗಿ 10 ಮಂದಿಯ ತಂಡ ಪಂದ್ಯದುದ್ದಕ್ಕೂ ಸೆಣಸಾಡಿತು.

ಮೊದಲಾರ್ಧದ ಕೊನೆಯ ಹಂತದಲ್ಲಿ ವಲೆನ್ಸಿಯಾ ಅಮೋಘ ಆಟವಾಡಿ ಮುನ್ನಡೆ ಹೆಚ್ಚಿಸಲು ಪ್ರಯತ್ನಿಸಿತು. ಆದರೆ ಗೋಲ್‌ಕೀಪರ್ ಡೇವಿಡ್ ಸೋರಿಯಾ ಅತ್ಯುತ್ತಮ ಆಟ ಪ್ರದರ್ಶಿಸಿದರು. 36ನೇ ನಿಮಿಷದಲ್ಲಿ ಡೆನಿಸ್ ಚೆರಿಶೆವ್ ಅವರ ಆಕ್ರಮಣವನ್ನು ತಡೆದು ಗೆಟಾಫೆಯ ಆತಂಕ ಕಡಿಮೆ ಮಾಡಿದರು. 

ದ್ವಿತೀಯಾರ್ಧದಲ್ಲಿ ಗೆಟಾಫೆ ತಂಡ ಸಮಬಲ ಸಾಧಿಸಲು ಭಾರಿ ಪ್ರಯತ್ನ ನಡೆಸಿತು. ಮೌರೊ ಅರಂಬರಿ ಎರಡು ಬಾರಿ ಪ್ರಬಲ ಆಕ್ರಮಣ ನಡೆಸಿದರು. ಆದರೆ ಚೆಂಡು ಗುರಿ ಸೇರಲು ವಲೆನ್ಸಿಯಾದ ರಕ್ಷಣಾ ವಿಭಾಗದ ಆಟಗಾರರು ಅವಕಾಶ ನೀಡಲಿಲ್ಲ. ಪಂದ್ಯದ ಮುಕ್ತಾಯಕ್ಕೆ 14 ನಿಮಿಷಗಳು ಬಾಕಿ ಇರುವಾಗ ಡೇವಿಡ್ ಸೋರಿಯಾ ಅವರಿಗೂ ರೆಡ್ ಕಾರ್ಡ್ ತೋರಿಸಲಾಯಿತು. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ವಲೆನ್ಸಿಯಾಗೆ ಸಾಧ್ಯವಾಗಲಿಲ್ಲ.

‘ಬಾರ್ಸಿಲೋನಾಗೆ ‘ವರ್ತಮಾನ’ ಮುಖ್ಯ’

ಲಯೊನೆಲ್ ಮೆಸ್ಸಿ ತಂಡವನ್ನು ತೊರೆದದ್ದು ಬೇಸರದ ವಿಷಯ. ಆದರೆ ಅದು ಈಗ ಕಳೆದುಹೋದ ವಿಷಯ. ಕ್ಲಬ್‌ಗೆ ವರ್ತಮಾನವೇ ಮುಖ್ಯವಾಗಿದ್ದು ಬಲಿಷ್ಠ ತಂಡ ಕಟ್ಟಲು ಮುಂದಾಗುವುದಾಗಿ ಕೋಚ್‌ ರೊನಾಲ್ಡ್‌ ಕೊಯ್ಮನ್‌ ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು