ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಿಸ್ ಒಲಿಂಪಿಕ್ಸ್‌ಗೆ 100 ದಿನಗಳು

Published 16 ಏಪ್ರಿಲ್ 2024, 20:09 IST
Last Updated 16 ಏಪ್ರಿಲ್ 2024, 20:09 IST
ಅಕ್ಷರ ಗಾತ್ರ

ಪ್ಯಾರಿಸ್ ಒಲಿಂಪಿಕ್ಸ್‌ಗೆ ಕ್ಷಣಗಣನೆ ಆರಂಭವಾಗಿದೆ. ಆಯೋಜಕರು, ಕೋಚಿಂಗ್ ಸಿಬ್ಬಂದಿ, ಸ್ವಯಂಸೇವಕರು ಮತ್ತು ಕ್ರೀಡಾಪಟುಗಳಿಗೆ ಇದು ನಿರ್ಣಾಯಕ ಘಟ್ಟವಾಗಿದೆ. 100 ದಿನದಲ್ಲಿ ಅತಿದೊಡ್ಡ ಕ್ರೀಡಾ ಸಂಭ್ರಮ ಆರಂಭವಾಗಲಿದೆ.  

ಈವರೆಗೆ 44 ಒಲಿಂಪಿಕ್ ಕೋಟಾ ಸ್ಥಾನಗಳನ್ನು ಕಾಯ್ದಿರಿಸಲಾಗಿದ್ದು, ವಿವಿಧ ಕ್ರೀಡೆಗಳಲ್ಲಿ ಅರ್ಹತಾ ಗಡುವು ಕೊನೆಗೊಳ್ಳುವ ಮೊದಲು ಇನ್ನೂ ಹಲವಾರು ಸ್ಥಾನಗಳು ಸಿಗುವ ನಿರೀಕ್ಷೆಯಿದೆ.  

ಜಾವೆಲಿನ್‌ ಎಸೆತಗಾರ ನೀರಜ್ ಚೋಪ್ರಾ ಹಾಗೂ ಕಿಶೋರ್ ಜೆನಾ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. ಪಾರುಲ್ ಚೌಧರಿ (ಮಹಿಳೆಯರ 3000 ಮೀಟರ್ ಸ್ಟೀಪಲ್ ಚೇಸ್), ಅವಿನಾಶ್ ಸೇಬಲ್ (ಪುರುಷರ 3000 ಮೀಟರ್ ಸ್ಟೀಪಲ್ ಚೇಸ್) ಮತ್ತು ಮುರಳಿ ಶ್ರೀಶಂಕರ್ (ಪುರುಷರ ಲಾಂಗ್ ಜಂಪ್) ಪದಕದ ಭರವಸೆ ಮೂಡಿಸಿದ್ದಾರೆ. 

ಶೂಟರ್‌ಗಳು 20 ಒಲಿಂಪಿಕ್ ಬರ್ತ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೋಚ್ ಕ್ರೇಗ್ ಫುಲ್ಟನ್ ನೇತೃತ್ವದ ಪುರುಷರ ಹಾಕಿ ತಂಡ ಪದಕ ಗೆಲ್ಲುವ ವಿಶ್ವಾಸದಲ್ಲಿದೆ. ಬಾಕ್ಸಿಂಗ್‌ನಲ್ಲಿ ನಾಲ್ವರು ಮಹಿಳೆಯರು ಪ್ಯಾರಿಸ್‌ ಟಿಕೆಟ್ ಪಡೆದಿದ್ದಾರೆ. 

ವಿಶ್ವದ ಅಗ್ರಗಣ್ಯ ಜೋಡಿ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಸಿಂಗಲ್ಸ್‌ನಲ್ಲಿ ಎಚ್‌.ಎಸ್.ಪ್ರಣಯ್, ಲಕ್ಷ್ಯ ಸೇನ್ ಮತ್ತು ಒಲಿಂಪಿಕ್‌ ಪದಕ ವಿಜೇತೆ ಪಿ.ವಿ.ಸಿಂಧು, ಅಶ್ವಿನಿ ಪೊನ್ನಪ್ಪ ಅವರು ಪದಕ ಗೆಲ್ಲುವ ನಿರೀಕ್ಷೆ ಇದೆ. ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಅರ್ಹತೆ ಗಿಟ್ಟಿಸಿದ್ದಾರೆ. ಭಾರತದ ಧ್ವಜಧಾರಿಯಾಗಿರುವ ಟೆಬಲ್ ಟೆನಿಸ್ ಆಟಗಾರ ಶರತ್‌ ಕಮಲ್ ಅವರಿಗೆ ಇದು ಐದನೇ ಒಲಿಂಪಿಕ್ಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT