ಭಾರತದ ಆತಿಥ್ಯದಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್, ಲಾಡ್ಸ್ನಲ್ಲಿ ಆಯೋಜನೆಗೊಳ್ಳಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್, ಪಾಕಿಸ್ತಾನ ಆತಿಥ್ಯದ ಐಸಿಸಿ ಚಾಂಪಿಯನ್ಸ್ ಟ್ರೋಫಿ, ನವದೆಹಲಿಯಲ್ಲಿ ನಡೆಯುವ ಚೊಚ್ಚಲ ಕೊಕ್ಕೊ ವಿಶ್ವಕಪ್, ಫಿಡೆ ಮಹಿಳೆಯರ ಚೆಸ್ ವಿಶ್ವಕಪ್ ಟೂರ್ನಿ ಈ ವರ್ಷ ನಡೆಯಲಿರುವ ಪ್ರಮುಖ ಕ್ರೀಡಾಕೂಟಗಳಲ್ಲಿ ಸೇರಿವೆ.

2025ರಲ್ಲಿ ನಡೆಯಲಿರುವ ಪ್ರಮುಖ ಕೂಟಗಳ ಪಟ್ಟಿ ಇಲ್ಲಿವೆ...

ಮಹಿಳೆಯರ ಹಾಕಿ: ಜ.12ರಿಂದ 26ರವರೆಗೆ ರಾಂಚಿಯಲ್ಲಿ ಹಾಕಿ ಇಂಡಿಯಾ ಲೀಗ್ ಟೂರ್ನಿ ಆಯೋಜನೆಗೊಂಡಿದೆ.

ಆಸ್ಟ್ರೇಲಿಯಾ ಓಪನ್ ಟೆನಿಸ್: ಆಸ್ಟ್ರೇಲಿಯಾದ ಮೆಲ್ಬರ್ನ್ನಲ್ಲಿ ಜ.12ರಿಂದ 16ರವರೆಗೆ ನಡೆಯಲಿದೆ.

ಕೊಕ್ಕೊ ವಿಶ್ವಕಪ್: ನವದೆಹಲಿಯಲ್ಲಿ ಜ.13ರಿಂದ 19ರವರೆಗೆ ಚೊಚ್ಚಲ ಟೂರ್ನಿ ನಡೆಯಲಿದೆ.

ಇಂಡಿಯಾ ಓಪನ್ ಬ್ಯಾಡ್ಮಿಂಟನ್: ಜ.14ರಿಂದ 19ರವರೆಗೆ ಟೂರ್ನಿಯು ನವದೆಹಲಿಯಲ್ಲಿ ನಡೆಯಲಿದೆ.

ಏಷ್ಯನ್ ಚಳಿಗಾಲದ ಕ್ರೀಡೆ: ಫೆ.7ರಿಂದ 14ರವರೆಗೆ ಚೀನಾದ ಹೈಲಾಂಗ್ಜಿಯಾಂಗ್ನ ಹರ್ಬಿನ್ನಲ್ಲಿ ಕೂಟ ಆಯೋಜನೆಗೊಂಡಿದೆ.

ಮಹಿಳೆಯರ ಹಾಕಿ: ಫೆ.15ರಿಂದ 19ರವರೆಗೆ ಎಫ್ಐಎಚ್ ಹಾಕಿ ಪ್ರೊ ಲೀಗ್ ನಡೆಯಲಿದೆ.

ಪುರುಷರ ಹಾಕಿ: ಫೆ.15ರಿಂದ 22ರವರೆಗೆ ಎಫ್ಐಎಚ್ ಹಾಕಿ ಪ್ರೊ ಲೀಗ್ ಆಯೋಜನೆಗೊಂಡಿದೆ.

ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್: ಪಾಕಿಸ್ತಾನದ ಆತಿಥ್ಯದಲ್ಲಿ ಫೆ.19ರಿಂದ ಮಾರ್ಚ್ 9ರವರೆಗೆ ಟೂರ್ನಿ ನಡೆಯಲಿದೆ. ಭಾರತದ ಪಂದ್ಯಗಳು ದುಬೈನಲ್ಲಿ ಆಯೋಜನೆಗೊಂಡಿವೆ.

ಆಲ್ ಇಂಗ್ಲೆಂಡ್ ಓಪನ್: ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನಲ್ಲಿ ಮಾರ್ಚ್ 11ರಿಂದ 16ರವರೆಗೆ ಬ್ಯಾಡ್ಮಿಂಟನ್ ಟೂರ್ನಿ ನಡೆಯಲಿದೆ.

ಐಪಿಎಲ್ ಕ್ರಿಕೆಟ್: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ 18ನೇ ಆವೃತ್ತಿ ಮಾರ್ಚ್ 14ರಿಂದ ಆರಂಭಗೊಂಡು ಮೇ 25ರವರೆಗೆ ನಡೆಯಲಿದೆ.

ಪುರುಷರ ಹಾಕಿ: ಏ.4ರಿಂದ 15ರವರೆಗೆ 15ನೇ ಹಾಕಿ ಇಂಡಿಯಾ ಸೀನಿಯರ್ ರಾಷ್ಟ್ರೀಯ ಚಾಂಪಿಯನ್ಷಿಪ್ ನಡಯಲಿದೆ.

ಸ್ನೂಕರ್ ಚಾಂಪಿಯನ್ಷಿಪ್: ಇಂಗ್ಲೆಂಡ್ನಲ್ಲಿ ಏ.19ರಿಂದ ಮೇ 5ರವರೆಗೆ ವಿಶ್ವ ಸ್ನೂಕರ್ ಚಾಂಪಿಯನ್ಷಿಪ್ ನಡೆಯಲಿದೆ.

ವಿಶ್ವ ಅಥ್ಲೆಟಿಕ್ಸ್ ರಿಲೆ: ಪುರುಷರ, ಮಹಿಳೆಯರ ಮತ್ತು ಮಿಶ್ರ ವಿಶ್ವ ಅಥ್ಲೆಟಿಕ್ಸ್ ರಿಲೆ ಮೇ 10 ಮತ್ತು 11ರಂದು ಚೀನಾದಲ್ಲಿ ಆಯೋಜನೆಗೊಂಡಿದೆ.

ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್ಷಿಪ್: ಕತಾರ್ನ ದೋಹಾದಲ್ಲಿ ಮೇ 17ರಿಂದ 25ರವರೆಗೆ ನಡೆಯಲಿದೆ.

ಫ್ರೆಂಚ್ ಓಪನ್ ಟೆನಿಸ್: ರೋಲ್ಯಾಂಡ್ ಗ್ಯಾರೋಸ್ನಲ್ಲಿ ಮೇ 25ರಿಂದ ಜೂನ್ 7ರವರೆಗೆ ನಡೆಯಲಿದೆ.

ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್: ದಕ್ಷಿಣ ಕೊರಿಯಾದಲ್ಲಿ ಮೇ 27ರಿಂದ 31ರವರೆಗೆ ಕ್ರೀಡಾಕೂಟ ಆಯೋಜನೆಗೊಂಡಿದೆ.

ಫಿಫಾ ಕ್ಲಬ್ ವಿಶ್ವಕಪ್ ಫುಟ್ಬಾಲ್: ಅಮೆರಿಕದ ಆತಿಥ್ಯದಲ್ಲಿ ಜೂನ್ 14ರಿಂದ ಜುಲೈ 13ರವರೆಗೆ ಟೂರ್ನಿ ನಡೆಯಲಿದೆ.

ವಿಂಬಲ್ಡನ್ ಟೆನಿಸ್: ಆಲ್ ಇಂಗ್ಲೆಂಡ್ ಟೆನಿಸ್ ಕ್ಲಬ್ನಲ್ಲಿ ಜೂನ್ 30ರಿಂದ ಜುಲೈ 13ರವರೆಗೆ ಟೂರ್ನಿ ಆಯೋಜನೆಯಾಗಿದೆ.

ಫಿಡೆ ಮಹಿಳೆಯರ ಚೆಸ್ ವಿಶ್ವಕಪ್: ಜಾರ್ಜಿಯಾದಲ್ಲಿ ಜುಲೈ 5ರಿಂದ 29ರವರೆಗೆ ಟೂರ್ನಿ ನಡೆಯಲಿದೆ

ವಿಶ್ವ ಈಜು ಚಾಂಪಿಯನ್ಷಿಪ್: ಸಿಂಗಪುರದ ಆತಿಥ್ಯದಲ್ಲಿ ವಿಶ್ವ ಈಜು ಕೂಡ ಜುಲೈ 11ರಿಂದ ಆ.3ರವರೆಗೆ ನಡೆಯಲಿದೆ.

ಮಹಿಳಾ ಕ್ರಿಕೆಟ್ ವಿಶ್ವಕಪ್: ಭಾರತದ ಆತಿಥ್ಯದಲ್ಲಿ ಆ.15ರಿಂದ ಸೆಪ್ಟೆಂಬರ್ 15ರವರೆಗೆ ಏಕದಿನ ಟೂರ್ನಿ ಆಯೋಜನೆಗೊಂಡಿದೆ.

ಅಮೆರಿಕ ಓಪನ್ ಟೆನಿಸ್: ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಆ.25ರಿಂದ ಸೆ.7ರವರೆಗೆ ಟೂರ್ನಿ ನಡೆಯಲಿದೆ

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್: ಪ್ಯಾರಿಸ್ನಲ್ಲಿ ಆ.25ರಿಂದ 31ರವರೆಗೆ ಆಯೋಜನೆಯಾಗಿದೆ.

ಡೈಮಂಡ್ ಲೀಗ್ ಫೈನಲ್: ಜ್ಯೂರಿಚ್ನಲ್ಲಿ ಆ.27 ಮತ್ತು 28ರಂದು ಫೈನಲ್ ಸ್ಪರ್ಧೆ ನಡೆಯಲಿದೆ.

ವಿಶ್ವ ಆರ್ಚರಿ ಚಾಂಪಿಯನ್ಷಿಪ್: ಸೆ.5ರಿಂದ 15ರವರೆಗೆ ದಕ್ಷಿಣ ಕೊರಿಯಾದಲ್ಲಿ ಟೂರ್ನಿ ಆಯೋಜನೆಯಾಗಿದೆ.

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್: ಟೋಕಿಯೊದಲ್ಲಿ ಸೆ.13ರಿಂದ 21ರವರೆಗೆ ಕೂಟ ನಡೆಯಲಿದೆ.

ವಿಶ್ವ ಕುಸ್ತಿ ಚಾಂಪಿಯನ್ಷಿಪ್: ಕ್ರೊವೇಷ್ಯಾದಲ್ಲಿ ಸೆ.13ರಿಂದ 21ರವರೆಗೆ ಕೂಟ ನಡೆಯಲಿದೆ.

ಫಿಫಾ ಯೂತ್ ವಿಶ್ವಕಪ್: ಸೆ.27ರಿಂದ ಅ.19ರವರೆಗೆ ಐದು ರಾಷ್ಟ್ರಗಳ ಆತಿಥ್ಯದಲ್ಲಿ 20 ವರ್ಷದೊಳಗಿನವರ ವಿಶ್ವಕಪ್ ಫುಟ್ಬಾಲ್ ಟೂರ್ನಿ ನಡೆಯಲಿದೆ.

ವಿಶ್ವ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್: ನಾರ್ವೆಯ ಆತಿಥ್ಯದಲ್ಲಿ ಅ.1ರಿಂದ 10ರವರೆಗೆ ಟೂರ್ನಿ ಆಯೋಜನೆಗೊಂಡಿದೆ.

ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್: ಅ.13ರಿಂದ 19ರವರೆಗೆ ಭಾರತದ ಆತಿಥ್ಯದಲ್ಲಿ ಗುವಾಹಟಿಯಲ್ಲಿ ಟೂರ್ನಿ ನಡೆಯಲಿದೆ.

ವಿಶ್ವ ಬಾಕ್ಸಿಂಗ್ ಕಪ್ ಫೈನಲ್: ಭಾರತದ ಆತಿಥ್ಯದಲ್ಲಿ ನಡೆಯುವ ಟೂರ್ನಿ ನವೆಂಬರ್ನಲ್ಲಿ ನಡೆಯಲಿದೆ. (ವೇಳಾಪಟ್ಟಿ ನಿಗದಿಯಾಗಿಲ್ಲ)

ವಿಶ್ವ ಶೂಟಿಂಗ್: ಕೈರೊದಲ್ಲಿ ನ.6ರಿಂದ 16ರವರೆಗೆ ವಿಶ್ವ ರೈಫಲ್ ಮತ್ತು ಪಿಸ್ತೂಲ್ ಚಾಂಪಿಯನ್ಷಿಪ್ ನಡೆಯಲಿದೆ.

ಪುರುಷರ ಹಾಕಿ ಜೂನಿಯರ್ ವಿಶ್ವಕಪ್: ಭಾರತದ ಆತಿಥ್ಯದಲ್ಲಿ ಟೂರ್ನಿ ನಡೆಯಲಿದೆ. (ವೇಳಾಪಟ್ಟಿ ಅಂತಿಮಗೊಂಡಿಲ್ಲ)

ಬಿಡಬ್ಲ್ಯುಎಫ್ ವಿಶ್ವ ಟೂರ್ ಬ್ಯಾಡ್ಮಿಂಟನ್: ಚೀನಾದಲ್ಲಿ ಡಿ.10ರಿಂದ 14ರವರೆಗೆ ಟೂರ್ನಿ ಆಯೋಜನೆಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.