ಪ್ಯಾರಿಸ್: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದ ಭಾರತದ ಅದಿತಿ ಅಶೋಕ್ ಅವರು ಪ್ಯಾರಿಸ್ ನಲ್ಲಿ ನಿರಾಸೆ ಮೂಡಿಸಿದರು.
ಮಹಿಳೆಯರ ವೈಯಕ್ತಿಕ ಗಾಲ್ಫ್ ಸ್ಪರ್ಧೆಯಲ್ಲಿ 26 ವರ್ಷ ವಯಸ್ಸಿನ ಅದಿತಿ ಅವರು ಜಂಟಿ 29ನೇ ಸ್ಥಾನದಲ್ಲಿ ಅಭಿಯಾನ ಅಂತ್ಯಗೊಳಿಸಿದರು. ಭಾರತದ ಮತ್ತೊಬ್ಬ ಸ್ಪರ್ಧಿ ದೀಕ್ಷಾ ದಾಗರ್ ಜಂಟಿ 49ನೇ ಸ್ಥಾನ ಪಡೆದರು.
ನ್ಯೂಜಿಲೆಂಡ್‌ನ ಲೆಡಿಯಾ ಕೊ ಚಿನ್ನ, ಜರ್ಮನಿಯ ಎಸ್ಟರ್ ಹೆನ್ಸೆಲೈಟ್ ಬೆಳ್ಳಿ ಮತ್ತು ಚೀನಾದ ಕ್ಸಿಯು ಲಿನ್ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು.
ಈ ವಿಜಯದೊಂದಿಗೆ ಮೂರು ಒಲಿಂಪಿಕ್ಸ್‌ಗಳಲ್ಲಿ ಸತತ ಮೂರು ಪದಕಗಳನ್ನು ಗೆದ್ದ ಮೊದಲ ಗಾಲ್ಫ್ ಆಟಗಾರ್ತಿ ಎಂಬ ಖ್ಯಾತಿಗೆ ಕೊ ಪಾತ್ರರಾದರು.