ಭುವನೇಶ್ವರ : ಖ್ಯಾತನಾಮ ಅಥ್ಲೀಟ್ಗಳಾದ ಅನುರಾಣಿ, ಅನಿಮೇಶ್ ಕುಜೂರ್ ಮತ್ತು ಮುರಳಿ ಶ್ರೀಶಂಕರ್ ಅವರು ಇಲ್ಲಿನ ಕಳಿಂಗ ಕ್ರೀಡಾಂಗದಲ್ಲಿ ಭಾನುವಾರ ನಡೆಯುವ ಚೊಚ್ಚಲ ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಕಂಚಿನ ಮಟ್ಟದ ಸ್ಪರ್ಧೆಯಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.

ಒಟ್ಟು 21.89 ಲಕ್ಷ ಬಹುಮಾನ ಮೊತ್ತವನ್ನು ಹೊಂದಿರುವ ಕ್ರೀಡಾಕೂಟವು 15 ದೇಶಗಳಿಂದ 150ಕ್ಕೂ ಹೆಚ್ಚು ಕ್ರೀಡಾಪಟುಗಳನ್ನು ಆಕರ್ಷಿಸಿದೆ.

2023ರ ಏಷ್ಯನ್ ಗೇಮ್ಸ್ ಚಾಂಪಿಯನ್, ಅನುಭವಿ ಜಾವೆಲಿನ್ ಥ್ರೋಪಟು ಅನುರಾಣಿ ಅವರು ಚಿನ್ನ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದಾರೆ. ಬುಧವಾರ ಪೋಲೆಂಡ್ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ನ ಮಹಿಳೆಯರ ಜಾವೆಲಿನ್ ಥ್ರೊನಲ್ಲಿ 32 ವರ್ಷದ ರಾಣಿ 62.59 ಮೀಟರ್ ಸಾಧನೆಯೊಂದಿಗೆ ಚಿನ್ನ ಗೆದ್ದು, ಉತ್ತಮ ಲಯದಲ್ಲಿದ್ದಾರೆ.

‘ಟೋಕಿಯೊ ವಿಶ್ವ ಚಾಂಪಿಯನ್ಷಿಪ್ಗೆ ಅರ್ಹತೆ ಪಡೆಯುವ ದೃಷ್ಟಿಯಿಂದ ಮುಂದಿನ ಎರಡು ವಾರಗಳಲ್ಲಿ ನನ್ನ ಪ್ರದರ್ಶನವನ್ನು ಇನ್ನಷ್ಟು ಉತ್ತಮಪಡಿಸಲು ಪ್ರಯತ್ನಿಸುತ್ತಿದ್ದೇನೆ. ನಾನು ಭುವನೇಶ್ವರದ ಸ್ಥಳೀಯ ಹವಾಮಾನ ಪರಿಸ್ಥಿತಿಗೆ ಒಗ್ಗಿಕೊಂಡಿದ್ದೇನೆ’ ಎಂದು ರಾಷ್ಟ್ರೀಯ ದಾಖಲೆ (63.82ಮೀ) ಹೊಂದಿರುವ ರಾಣಿ ಶನಿವಾರ ಪ್ರತಿಕ್ರಿಯಿಸಿದ್ದಾರೆ.

ವಿಶ್ವ ಚಾಂಪಿಯನ್ಷಿಪ್ನ ನೇರ ಅರ್ಹತೆಗೆ 64 ಮೀಟರ್ ಗುರಿ ನಿಗದಿಪಡಿಸಲಾಗಿದೆ. ಆದರೆ, ಭಾರತದ ಅಥ್ಲೀಟ್ ರ್ಯಾಂಕಿಂಗ್ ಕೋಟಾ ಆಧಾರದಲ್ಲಿ ಟಿಕೆಟ್ ಪಡೆಯುವ ನಿರೀಕ್ಷೆಯಿದೆ.

ಪುರುಷರ 200 ಮೀಟರ್ ಓಟದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಅನಿಮೇಶ್ ಕುಜೂರ್ (20.32ಸೆ) ಅವರು ವಿಶ್ವ ರ್ಯಾಂಕಿಂಗ್ನಲ್ಲಿ 42ನೇ ಸ್ಥಾನದಲ್ಲಿದ್ದಾರೆ. 21 ವರ್ಷದ ಕುಜೂರ್ ತವರಿನ ಟ್ರ್ಯಾಕ್ನಲ್ಲಿ ಮಿಂಚು ಹರಿಸಿ, ವಿಶ್ವ ಚಾಂಪಿಯನ್ಷಿಪ್ಗೆ ನೇರ ಅರ್ಹತೆ (ಸಮಯ: 20.16 ಸೆ) ಪಡೆಯುವ ಛಲದಲ್ಲಿದ್ದಾರೆ.

100 ಮೀ ಓಟದಲ್ಲಿಯೂ ಕುಜೂರ್ ಕಣಕ್ಕೆ ಇಳಿಯುವರು. 10.18 ಸೆಕೆಂಡುಗಳ ರಾಷ್ಟ್ರೀಯ ದಾಖಲೆಯನ್ನು ಹೊಂದಿರುವ ಅವರು, ಮಲೇಷ್ಯಾದ ಮುಹಮ್ಮದ್ ಅಜೀಮ್ ಫಾಹ್ಲಿ (10.01ಸೆ.) ಅವರ ಸವಾಲನ್ನು ಎದುರಿಸಲಿದ್ದಾರೆ.

ದೇಶದ ಅಗ್ರಮಾನ್ಯ ಲಾಂಗ್ಜಂಪ್ ಸ್ಪರ್ಧಿ ಮುರಳಿ ಶ್ರೀಶಂಕರ್ ಅವರು ವಿಶ್ವ ರ್ಯಾಂಕಿಂಗ್ನಲ್ಲಿ ತಮ್ಮ ಸ್ಥಾನವನ್ನು ಬಲಪಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಗಾಯದಿಂದ ಚೇತರಿಸಿ ಪುನರಾಗಮನದ ನಂತರ ಸತತ ಮೂರು ಪ್ರಶಸ್ತಿಗಳನ್ನು ಗೆದ್ದಿರುವ 26 ವರ್ಷದ ಮುರಳಿ, ಚಿನ್ನದ ಮೇಲೆ ಕಣ್ಣಿಟ್ಟಿದ್ದಾರೆ.

ಭಾರತದ ಮಹಿಳಾ ಲಾಂಗ್ಜಂಪ್ ತಾರೆಗಳಾದ ಶೈಲಿ ಸಿಂಗ್ (ಋತುವಿನ ಅತ್ಯುತ್ತಮ 6.64 ಮೀ) ಮತ್ತು ಆನ್ಸಿ ಸೋಜನ್ (6.54 ಮೀ), ಏಷ್ಯನ್ ಚಾಂಪಿಯನ್ಷಿಪ್ಗಳ 800 ಮೀ. ದಾಖಲೆ ಹೊಂದಿರುವ ಮೊಹಮ್ಮದ್ ಅಫ್ಸಲ್ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದ್ದಾರೆ.

ಪುರುಷರ ಜಾವೆಲಿನ್ನಲ್ಲಿ ಏಷ್ಯನ್ ಬೆಳ್ಳಿ ಪದಕ ವಿಜೇತ ಸಚಿನ್ ಯಾದವ್ (ವೈಯಕ್ತಿಕ ಶ್ರೇಷ್ಠ 85.16 ಮೀ.) ಅವರಿಗೆ ಶ್ರೀಲಂಕಾದ ಸುಮೇದಾ ರಣಸಿಂಗ್ ಮತ್ತು ರುಮೇಶ್ ಪತಿರಾಗೆ ಸವಾಲೊಡ್ಡುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.