ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಏರ್‌ಗನ್‌ ಚಾಂಪಿಯನ್‌ಷಿಪ್‌| ಶೂಟಿಂಗ್‌ನಲ್ಲ ದಿವ್ಯಾಂಶ್‌ಗೆ ಚಿನ್ನ

Last Updated 11 ನವೆಂಬರ್ 2022, 13:30 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಶೂಟರ್‌ಗಳು ಕೊರಿಯಾದ ದೇಗುನಲ್ಲಿ ನಡೆಯುತ್ತಿರುವ 15ನೇ ಏಷ್ಯನ್ ಏರ್‌ಗನ್‌ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ತಲಾ ಒಂದು ಚಿನ್ನ, ಬೆಳ್ಳಿ ಹಾಗೂ ಕಂಚು ಗೆದ್ದುಕೊಂಡರು.

ಜೂನಿಯರ್‌ ಪುರುಷರ 10 ಮೀ. ಏರ್‌ ರೈಫಲ್‌ ವಿಭಾಗದಲ್ಲಿ ದಿವ್ಯಾಂಶ್‌ ಸಿಂಗ್‌ ಪನ್ವರ್‌ ಚಿನ್ನ ಗೆದ್ದರೆ, ಇದೇ ಸ್ಪರ್ಧೆಯ ಸೀನಿಯರ್‌ ವಿಭಾಗದಲ್ಲಿ ಕಿರಣ್‌ ಅಂಕುಶ್‌ ಜಾಧವ್ ಬೆಳ್ಳಿ ಜಯಿಸಿದರು. ಕಾರ್ತಿಕ್‌ ರವಿಶಂಕರ್‌ ಅವರು ಜೂನಿಯರ್‌ ಪುರುಷರ ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಕಂಚು ಪಡೆದರು.

ಚಿನ್ನದ ಪದಕಕ್ಕಾಗಿ ನಡೆದ ಪೈಪೋಟಿಯಲ್ಲಿ ದಿವ್ಯಾಂಶ್‌ 17–9 ರಲ್ಲಿ ಸ್ಥಳೀಯ ಫೇವರಿಟ್‌ ಬಾಂಗ್ ಸುಂಗ್‌ಹೊ ಅವರನ್ನು ಮಣಿಸಿದರು.

ಅಂಕುಶ್‌ ಅವರು ಫೈನಲ್‌ನಲ್ಲಿ 10–16 ರಲ್ಲಿ ಕೊರಿಯಾದ ಪಾರ್ಕ್‌ ಹಜುನ್‌ ಕೈಯಲ್ಲಿ ಪರಾಭವಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT