ಬೆಂಗಳೂರು: ಬೆಂಗಳೂರು ಟರ್ಫ್ ಕ್ಲಬ್ನಲ್ಲಿ ಶನಿವಾರ ನಡೆದ ರೋಚಕ ರೇಸ್ನಲ್ಲಿ ಕ್ರಾಸ್ವಾಟರ್ ಅಶ್ವವು ಕೆ.ಎನ್. ಗುರುಸ್ವಾಮಿ ಮೆಮೋರಿಯಲ್ ಟ್ರೋಫಿ ಜಯಿಸಿತು.

ಈ ರೇಸ್ನಲ್ಲಿ ಮುಂಬೈ ಸ್ಪರ್ಧಿ ಕಾವ್ಯ ಪ್ರಶಸ್ತಿ ಗೆಲ್ಲುವ ನೆಚ್ಚಿನ ಕುದುರೆಯಾಗಿತ್ತು. ಬೇಡಿಕೆಯಲ್ಲಿ ಫೇವರಿಟ್ ಕೂಡ ಆಗಿತ್ತು. ಆದರೆ, ಕ್ರಾಸ್ವಾಟರ್ ಕುದುರೆಯು ಆರಂಭದಿಂದಲೂ ಮುನ್ನಡೆ ಸಾಧಿಸಿತ್ತು. ಅರ್ಜುನ್ ಮಂಗ್ಲೋರ್ಕರ್ ತರಬೇತಿಯಲ್ಲಿ ಪಳಗಿರುವ ಕ್ರಾಸ್ವಾಟರ್ ಕುದುರೆಯನ್ನು ಜಾಕಿ ಅಲೀಮುದ್ದಿನ್ ಸವಾರಿ ಮಾಡಿದರು. ಕೊನೆಯವರೆಗೂ ತನ್ನ ಲೀಡ್ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾದರು.

ಕಾವ್ಯ ಕುದುರೆ ಕೊನೆಯ 300 ಮೀಟರ್ಸ್ ಓಟದಲ್ಲಿ ತೀವ್ರ ಪೈಪೋಟಿ ಒಡ್ಡಿತು. ಆದರೂ ಗೆಲುವು ಸಾಧಿಸಲಿಲ್ಲ. ಮಿಸ್ ಸ್ಮೈಲಿ ಏಂಜೆಲ್ ಮತ್ತು ಚೋಟಿಪಾರಿ ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನ ಪಡೆದವು.

ದಿನದ ಪ್ರಧಾನ ರೇಸ್ ವಾರ್ ಹ್ಯಾಮರ್ ಮಿಲಿಯನ್ ರೇಸ್ನಲ್ಲಿ ಸುಲೈಮಾನ್ ಅತೋಲಾಹಿ ತರಬೇತಿಯಲ್ಲಿ ಪಳಗಿರುವ ಸರ್ಕಲ್ ಆಫ್ ಡ್ರೀಮ್ಸ್ ಗೆಲುವು ಸಾಧಿಸಿತು. ರೆಡ್ ಬಿಷಪ್, ಸ್ಟಾರ್ಮಿ ಸೀ ಮತ್ತು ಐಸ್ ಆಫ್ ಫೈರ್ ಕ್ರಮವಾಗಿ ಉಳಿದ ಸ್ಥಾನಗಳನ್ನು ಪಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.