ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್‌: ಬೀಗಲ್ಸ್‌ ಚಾಂಪಿಯನ್‌

Published : 22 ಜುಲೈ 2024, 18:55 IST
Last Updated : 22 ಜುಲೈ 2024, 18:55 IST
ಫಾಲೋ ಮಾಡಿ
0
ಬ್ಯಾಸ್ಕೆಟ್‌ಬಾಲ್‌: ಬೀಗಲ್ಸ್‌ ಚಾಂಪಿಯನ್‌
ಪ್ರಶಸ್ತಿ ವಿಜೇತ ಬೀಗಲ್ಸ್‌ ಬಿ.ಸಿ ತಂಡ. (ಎಡದಿಂದ) ನಿಂತವರು ಹರ್ಷಿತಾ (ಮ್ಯಾನೇಜರ್), ಮೇಖಲಾ, ಭೂಮಿಕಾ ಸಿಂಗ್, ಚಂದನಾ, ಮೋಹನ್ ಕುಮಾರ್ (ಕೋಚ್), ಸಂಜನಾ ರಮೇಶ್, ರೆನೆಟ್ಟಾ, ಭವ್ಯಾ (ಕುಳಿತವರು) ರಚನಾ, ಸಮರ, ಗುಣಶ್ರೀ, ಮೇಧಾ, ಸ್ವಾತಿ, ಪೂರ್ವಿ ಮತ್ತು ಬೃಂದಾ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ/ ಬಿ.ಕೆ. ಜನಾರ್ದನ್‌

ಬೆಂಗಳೂರು: ಬೀಗಲ್ಸ್‌ ಬಿ.ಸಿ ತಂಡವು ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆ ಆಶ್ರಯದಲ್ಲಿ ನಡೆದ ಮೊದಲ ರಾಜ್ಯ ಮಹಿಳೆಯರ ಬ್ಯಾಸ್ಕೆಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ADVERTISEMENT
ADVERTISEMENT

ಮೌಂಟ್ಸ್‌ ಕ್ಲಬ್‌ ರನ್ನರ್ಸ್‌ ಅಪ್‌ ಸ್ಥಾನ ಪಡೆದರೆ, ಡಿವೈಇಎಸ್‌ ಮೈಸೂರು ಮತ್ತು ಜೆಎಸ್‌ಸಿ ತಂಡಗಳು ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನ ಪಡೆದವು.

ವಿಜೇತ ತಂಡವು ಆಕರ್ಷಕ ಟ್ರೋಫಿಯೊಂದಿಗೆ ₹ 75 ಸಾವಿರ ನಗದು ಮತ್ತು ರನ್ನರ್‌ ಅಪ್‌ ತಂಡ ₹50 ಸಾವಿರ ಬಹುಮಾನ ಪಡೆದವು. ತೃತೀಯ ಮತ್ತು ಚತುರ್ಥ ಸ್ಥಾನ ಪಡೆದ ತಂಡಗಳು ಕ್ರಮವಾಗಿ ₹25 ಮತ್ತು ₹15 ಸಾವಿರ ಬಹುಮಾನ ಪಡೆದವು.

ಇಲ್ಲಿನ ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್‌ಬಾಲ್‌ ಕೋರ್ಟ್‌ನಲ್ಲಿ ಸೋಮವಾರ ನಡೆದ ಫೈನಲ್‌ ಲೀಗ್‌ ಪಂದ್ಯದಲ್ಲಿ ಬೀಗಲ್ಸ್‌ ತಂಡವು 65–32ರಿಂದ ಡಿವೈಇಎಸ್‌ ಮೈಸೂರು ತಂಡವನ್ನು ಮಣಿಸಿತು. ಬೀಗ‌ಲ್ಸ್‌ ಪರ ಚಂದನಾ 21, ಸಂಜನಾ 18, ಮೇಖಲಾ 14 ಅಂಕದೊಂದಿಗೆ ಮಿಂಚಿದರು. ಮತ್ತೊಂದು ಪಂದ್ಯಲ್ಲಿ ಮೌಂಟ್ಸ್‌ ಕ್ಲಬ್‌ ತಂಡವು 70–51ರಿಂದ ಜೆಎಸ್‌ಸಿ ತಂಡವನ್ನು ಸೋಲಿಸಿತು. 

ADVERTISEMENT

ಚಾಂಪಿಯನ್‌ಷಿಪ್‌ನ ಅತ್ಯುತ್ತಮ ಆಟಗಾರ್ತಿಯಾಗಿ ಮೌಂಟ್ಸ್ ಕ್ಲಬ್‌ನ ಪಾವನಿ ಎಸ್. ಮತ್ತು ಭರವಸೆಯ ಆಟಗಾರ್ತಿಯಾಗಿ ಬೀಗಲ್ಸ್‌ನ ಸ್ವಾತಿ ಎಸ್. ಹೊರಹೊಮ್ಮಿದರು.

ವಿಜೇತ ತಂಡಕ್ಕೆ ಎಫ್‌ಐಬಿಎ ಏಷ್ಯಾ ಅಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಕೆ.ಗೋವಿಂದರಾಜ್, ಶಾಸಕ ಅಪ್ಪಾಜಿ ಸಿ.ಎಸ್. ನಾಡಗೌಡ, ಕೆಎಸ್‌ಬಿಬಿಎ ಅಧ್ಯಕ್ಷ, ಪೊಲೀಸ್ ಆಯುಕ್ತ ಬಿ.ದಯಾನಂದ, ಕೆಎಸ್‌ಬಿಬಿಎ ಉಪಾಧ್ಯಕ್ಷ ರಾಜನ್‌ ಆರ್‌. ಬಹುಮಾನ ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
Comments0