ಬೆಂಗಳೂರು: ಪ್ರದೀಪ್ ಸಿಂಗ್ ಚೌಧರಿ ಮತ್ತು ಅಶ್ವಿನಿ ಜಾಧವ್ ಅವರು ನಗರದಲ್ಲಿ ಭಾನುವಾರ ಎನ್ಇಬಿ ಸ್ಪೋರ್ಟ್ಸ್ ಆಯೋಜಿಸಿದ್ದ ‘ವಿಪ್ರೊ ಬೆಂಗಳೂರು ಮ್ಯಾರಥಾನ್’ನ 12ನೇ ಆವೃತ್ತಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ಪ್ರಶಸ್ತಿ ಗೆದ್ದರು.

ಭಾರತ ಅಥ್ಲೆಟಿಕ್ಸ್ ಫೆಡರೇಷನ್ನಿಂದ ‘ಓಪನ್ ನ್ಯಾಷನಲ್ ಮ್ಯಾರಥಾನ್’ ಎಂದು ಗುರುತಿಸಲ್ಪಟ್ಟ ಸ್ಪರ್ಧೆಯಲ್ಲಿ ಪೂರ್ಣ ಮ್ಯಾರಥಾನ್, ಹಾಫ್ ಮ್ಯಾರಥಾನ್, 10ಕೆ ಓಟ ಮತ್ತು 5ಕೆ ಫನ್ ಓಟ ನಡೆಯಿತು. ಒಟ್ಟು 35,000ಕ್ಕೂ ಹೆಚ್ಚು ಮಂದಿ ಉತ್ಸಾಹದಿಂದ ಪಾಲ್ಗೊಂಡರು. ಬ್ಯಾಡ್ಮಿಂಟನ್ ದಂತಕಥೆ ಪುಲ್ಲೇಲ ಗೋಪಿಚಂದ್ ಅವರು ಸ್ಪರ್ಧೆಗೆ ಚಾಲನೆ ನೀಡಿದರು.

ಆರ್ಮಿಯ ಪ್ರದೀಪ್ ಅವರು 2 ಗಂಟೆ 25 ನಿಮಿಷ 19 ಸೆಕೆಂಡ್ಗಳಲ್ಲಿ ಗುರಿ ತಲುಪಿ ಅಗ್ರಸ್ಥಾನ ಗಳಿಸಿದರು. ಅರುಣ್ ಧನ್ಸಿಂಗ್ ರಾಥೋಡ್ (02.25:31) ಮತ್ತು ರೈಲ್ವೇಸ್ನ ಹರ್ಷದ್ ಮಾತ್ಹೆ (02:26:02) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಜಯಿಸಿದರು.

ಮಹಿಳೆಯರ ವಿಭಾಗದಲ್ಲಿ ಅಶ್ವಿನಿ (03:07:07) ಚಿನ್ನ ತಮ್ಮದಾಗಿಸಿಕೊಂಡರೆ, ಭಾಗೀರಥಿ (03:07:07), ಚಿಂತಾ ಯಾದವ್ (03.16:03) ಕ್ರಮವಾಗಿ ನಂತರದ ಸ್ಥಾನ ಪಡೆದರು. ಪೂರ್ಣ ಮ್ಯಾರಥಾನ್ನಲ್ಲಿ ಒಟ್ಟು 3,500ಕ್ಕೂ ಹೆಚ್ಚು ಮಂದಿ ಸ್ಪರ್ಧಿಸಿದರು.

11,000ಕ್ಕೂ ಹೆಚ್ಚು ಓಟಗಾರರು ಭಾಗವಹಿಸಿದ ಹಾಫ್ ಮ್ಯಾರಥಾನ್ನಲ್ಲಿ ಅಂಕಿತ್ ಗುಪ್ತಾ ಪುರುಷರ ವಿಭಾಗದಲ್ಲಿ (1:06:10) ಮೊದಲ ಸ್ಥಾನ ಪಡೆದರೆ, ದೇವಾಂಗಿ ಪುರ್ಕಾಯಸ್ಥ (1:29:17) ಮಹಿಳೆಯರ ವಿಭಾಗದಲ್ಲಿ ಅಗ್ರಸ್ಥಾನಿಯಾದರು.

10ಕೆ ಓಟದಲ್ಲಿ ಪ್ರಮುಖ್ ಬಿ.ಆರ್. (39 ನಿಮಿಷ) ಅವರು ಪುರುಷರ ವಿಭಾಗದಲ್ಲಿ ಮತ್ತು ರಮ್ಯಾ ಆರ್. (52:47ನಿ) ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು. 5ಕೆ ಓಟದಲ್ಲಿ 15,000ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.