ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಟ್‍ವೇ ಬೆಂಗಳೂರು ಬೇಸಿಗೆ ಡರ್ಬಿ: ಸಿಂಥೆಸಿಸ್‌ ಗೆಲ್ಲುವ ನಿರೀಕ್ಷೆ

ರೇಸ್‌ ಪ್ರಿಯರ ಕುತೂಹಲಕ್ಕೆ ಕಾರಣವಾಗಿರುವ ಪ್ರತಿಷ್ಠಿತ ‘ಬೆಟ್‌ವೇ ಬೆಂಗಳೂರು ಬೇಸಿಗೆ ಡರ್ಬಿ–2023’ ಭಾನುವಾರ ನಡೆಯಲಿದೆ.
Published 15 ಜುಲೈ 2023, 19:59 IST
Last Updated 15 ಜುಲೈ 2023, 19:59 IST
ಅಕ್ಷರ ಗಾತ್ರ

–ರವಿಕುಮಾರ್

ಬೆಂಗಳೂರು: ರೇಸ್‌ ಪ್ರಿಯರ ಕುತೂಹಲಕ್ಕೆ ಕಾರಣವಾಗಿರುವ ಪ್ರತಿಷ್ಠಿತ ‘ಬೆಟ್‌ವೇ ಬೆಂಗಳೂರು ಬೇಸಿಗೆ ಡರ್ಬಿ–2023’ ಭಾನುವಾರ ನಡೆಯಲಿದೆ.

ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ (ಬಿಟಿಸಿ) ನಡೆಯುವ ಡರ್ಬಿಯಲ್ಲಿ ಏಳು ಗಂಡು ಮತ್ತು ನಾಲ್ಕು ಹೆಣ್ಣು ಕುದುರೆಗಳು ಸೇರಿದಂತೆ ಒಟ್ಟು 11 ಕುದುರೆಗಳು ಪೈಪೋಟಿ ನಡೆಸಲಿವೆ.

ಡರ್ಬಿಯಲ್ಲಿ 12 ಕುದುರೆಗಳು ಪಾಲ್ಗೊಳ್ಳಬೇಕಿತ್ತು. ಆದರೆ ‘ಕ್ರಿಸ್ಟೋಫಲ್’ ಕುದುರೆ ಕಣದಿಂದ ಹಿಂದೆ ಸರಿದಿದೆ. ಡೆಸ್ಟ್ರಾಯರ್‌, ಎಲ್ಪೆನರ್‌, ಸಿಂಥೆಸಿಸ್‌, ಜಮಾರಿ ಮತ್ತು ವೈಕೀಕಿ ಪ್ರಮುಖ ಸ್ಪರ್ಧಿಗಳು ಎನಿಸಿಕೊಂಡಿವೆ.

ರಾಜೇಶ್‌ ನರೇಡು ತರಬೇತಿಯಲ್ಲಿ ಪಳಗಿರುವ ಸಿಂಥೆಸಿಸ್‌, ಈಚೆಗೆ ನಡೆದ 1600 ಮೀ. ಕೋಲ್ಟ್ಸ್ ಚಾಂಪಿಯನ್‍ಶಿಪ್ ಸ್ಟೇಕ್ಸ್‌ನಲ್ಲಿ ಎರಡನೇ ಸ್ಥಾನ ಪಡೆದಿತ್ತು. ಕೊನೆಯ ಕೆಲವು ಮೀಟರ್ಸ್‌ ಇದ್ದಾಗ ವೇಗ ಹೆಚ್ಚಿಸಿಕೊಂಡರೂ ಅಗ್ರಸ್ಥಾನ ಲಭಿಸಿರಲಿಲ್ಲ.

ಆದರೆ ಡರ್ಬಿ ರೇಸ್‌ನ ದೂರವು 2000 ಮೀ. ಆಗಿರುವುದರಿಂದ, ಸಿಂಥೆಸಿಸ್‌ಗೆ ಕೊನೆಯಲ್ಲಿ ವೇಗ ಹೆಚ್ಚಿಸಿಕೊಂಡು, ಇತರ ಸ್ಪರ್ಧಿಗಳನ್ನು ಹಿಂದಿಕ್ಕಲು ಸಾಕಷ್ಟು ಕಾಲಾವಕಾಶ ಸಿಗಲಿದೆ. ಆದ್ದರಿಂದ ಸಿಂಥೆಸಿಸ್‌ ಗೆಲ್ಲಬಹುದು ಎಂಬುದು ನಮ್ಮ ನಿರೀಕ್ಷೆ. ಹೆಸರಾಂತ ಜಾಕಿ ಸೂರಜ್‌ ನರೇಡು ಅವರು ಸವಾರಿ ಮಾಡಲಿರುವುದೂ, ಸಿಂಥೆಸಿಸ್‌ ಜಯದ ಸಾಧ್ಯತೆಗಳನ್ನು ಹೆಚ್ಚಿಸಿದೆ.

ಫಿಲ್ಲೀಸ್‌ ಚಾಂಪಿಯನ್‍ಷಿಪ್ ಸ್ಟೇಕ್ಸ್‌ನಲ್ಲಿ ರೋಚಕ ಜಯಗಳಿಸಿರುವ ಜಮಾರಿ ಮತ್ತು ಅದೇ ರೇಸ್‍ನಲ್ಲಿ ಮೂರನೇ ಸ್ಥಾನ ಪಡೆದಿರುವ
ವೈಕೀಕಿ ಸಹ ತೀವ್ರ ಪೈಪೋಟಿ ನೀಡಬಲ್ಲುದು. ಈ ಕುದುರೆಗಳು ಕ್ರಮವಾಗಿ ಪಿ.ಶ್ರಾಫ್‌ ಮತ್ತು ಎಂ.ಕೆ.ಜಾಧವ್‌ ಅವರಿಂದ ತರಬೇತಿ ಪಡೆದಿವೆ. ಪ್ಯಾಟ್ರಿಕ್ ಕ್ವಿನ್‌ ಅವರಿಂದ ತರಬೇತಿ ಪಡೆದಿರುವ ಡೆಸ್ಟ್ರಾಯರ್‌, ಅನಿರೀಕ್ಷಿತ ಫಲಿತಾಂಶ ನೀಡಬಲ್ಲ ಸಾಮರ್ಥ್ಯ ಹೊಂದಿದೆ.

ಬೇಸಿಗೆ ಡರ್ಬಿಯನ್ನು ಬೆಟ್‍ವೇ ಆನ್‍ಲೈನ್ ಗೇಮಿಂಗ್ ಕಂಪನಿಯು ಪ್ರಾಯೋಜಿಸುತ್ತಿದೆ.

ನೇರಪ್ರಸಾರ: ಡರ್ಬಿ ಸೇರಿದಂತೆ ಭಾನುವಾರ ಆಯೋಜನೆಯಾಗಿರುವ ಎಲ್ಲ ಎಂಟು ರೇಸ್‍ಗಳನ್ನು ಬಿಟಿಸಿಯು ಯೂಟ್ಯೂಬ್‍ನಲ್ಲಿ ನೇರ ಪ್ರಸಾರ ಮಾಡಲಿದೆ. ದಿನದ ಆರನೇ ರೇಸ್‌ ಆಗಿರುವ ಡರ್ಬಿ, ಸಂಜೆ 4.15ಕ್ಕೆ ನಡೆಯಲಿದೆ.

*******

₹ 2 ಕೋಟಿ ಬಹುಮಾನ ಮೊತ್ತ

ಈ ಬಾರಿಯ ಡರ್ಬಿ ಒಟ್ಟು ₹ 2 ಕೋಟಿ ಬಹುಮಾನ ಮೊತ್ತವನ್ನು ಒಳಗೊಂಡಿತು. ಗೆಲ್ಲುವ ಕುದುರೆಯು ತನ್ನ ಮಾಲೀಕನಿಗೆ ₹ 3 ಲಕ್ಷ ಮೌಲ್ಯದ ಟ್ರೋಫಿ ಹಾಗೂ ₹ 98 ಲಕ್ಷ ನಗದು ಬಹುಮಾನ ದೊರಕಿಸಿಕೊಡಲಿದೆ.

*****ಡರ್ಬಿ ಸ್ಪರ್ಧಿಗಳ ವಿವರ

ಸಂಖ್ಯೆ;ಕುದುರೆ ಹೆಸರು;ಟ್ರೇನರ್‌;ಜಾಕಿ;ಕುದುರೆ ಹೊರುವ ತೂಕ;ಡ್ರಾ ಸಂಖ್ಯೆ

1;ಚಾಂಪಿಯನ್ಸ್ ವೇ;ಎಸ್.ನರೇಡು;ಯಶ್ ನರೇಡು;56;12

2;ಕ್ರಿಸ್ಟೋಫಲ್; (ಸ್ಪರ್ಧೆಯಿಂದ ಹಿಂದೆ ಸರಿದಿದೆ)

3;ಡೆಸ್ಟ್ರಾಯರ್;ಪ್ಯಾಟ್ರಿಕ್ ಕ್ವಿನ್; ಇಮ್ರಾನ್ ಚಿಸ್ಟಿ;56;9

4;ಎಲ್ಪೆನರ್;ಎಸ್.ಎಸ್.ಅತೋಲಾಹಿ;ಅಕ್ಷಯ್‍ಕುಮಾರ್;56;11

5;ಇಂಪೀರಿಯಲ್ ಜೆಶ್ಚರ್;ವಿಜಯ್ ಸಿಂಗ್;ಹಿಂದು ಸಿಂಗ್;56;2

6;ರೂಲಿಂಗ್ ಡೈನಾಸ್ಟಿ;ಪ್ರಸನ್ನಕುಮಾರ್;ಆಂಥೋಣಿ ರಾಜ್;56;8

7;ಸಿಂಥೆಸಿಸ್;ರಾಜೇಶ್ ನರೇಡು;ಸೂರಜ್ ನರೇಡು;56;3

8;ದಿ ಗಾಡ್‍ಫಾದರ್;ಎಂ.ನರೇಡು;ನೀರಜ್ ರಾವಲ್;56;7

9;ಆಸ್ಪೀಶಿಯಸ್ ಕ್ವೀನ್;ಎಸ್.ಇನಾಯತುಲ್ಲಾ;ಅಂಗದ್;54.5;6

10;ಜಮಾರಿ;ಪಿ.ಶ್ರಾಫ್;ಸಿ.ಉಮೇಶ್;54.5;5

11;ಎನ್.ಆರ್.ಐ ಡಬಲ್‍ಪವರ್;ಜಿ.ಶೆಖಾವತ್;ಎಸ್.ಸಕ್ಲೈನ್;54.5;10

12;ವೈಕೀಕಿ;ಎಂ.ಕೆ.ಜಾಧವ್;ಎನ್.ಎಸ್.ಪರ್ಮಾರ್;54.5;1

ಡೆಸ್ಟ್ರಾಯರ್
ಡೆಸ್ಟ್ರಾಯರ್
ಎಲ್ಪೆನರ್
ಎಲ್ಪೆನರ್
ಇಂಪೀರಿಯಲ್ ಜೆಶ್ಚರ್
ಇಂಪೀರಿಯಲ್ ಜೆಶ್ಚರ್
ರೂಲಿಂಗ್ ಡೈನಾಸ್ಟಿ
ರೂಲಿಂಗ್ ಡೈನಾಸ್ಟಿ
ಸಿಂಥೆಸಿಸ್
ಸಿಂಥೆಸಿಸ್
ದಿ ಗಾಡ್‍ಫಾದರ್
ದಿ ಗಾಡ್‍ಫಾದರ್
ಆಸ್ಪೀಶಿಯಸ್ ಕ್ವೀನ್
ಆಸ್ಪೀಶಿಯಸ್ ಕ್ವೀನ್
ಜಮಾರಿ
ಜಮಾರಿ
ಎನ್.ಆರ್.ಐ ಡಬಲ್‍ಪವರ್
ಎನ್.ಆರ್.ಐ ಡಬಲ್‍ಪವರ್
ವೈಕೀಕಿ
ವೈಕೀಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT