ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಟ್‌ಲಿಫ್ಟಿಂಗ್‌ ವಿಶ್ವಕಪ್‌: ಬಿಂದ್ಯಾರಾಣಿಗೆ ಕಂಚು

Published 2 ಏಪ್ರಿಲ್ 2024, 16:24 IST
Last Updated 2 ಏಪ್ರಿಲ್ 2024, 16:24 IST
ಅಕ್ಷರ ಗಾತ್ರ

ಫುಕೆಟ್‌ (ಥಾಯ್ಲೆಂಡ್),: ಕಾಮನ್ವೆಲ್ತ್‌ ಗೇಮ್ಸ್ ಪದಕ ವಿಜೇತೆ ಬಿಂದ್ಯಾರಾಣಿ ದೇವಿ ಅವರು ಐಡಬ್ಲ್ಯುಎಫ್‌ ವಿಶ್ವ ಕಪ್‌ ವೇಟ್‌ಲಿಫ್ಟಿಂಗ್‌ನ ಮಹಿಳೆಯರ 55 ಕೆ.ಜಿ. ವಿಭಾಗದಲ್ಲಿ ಮಂಗಳವಾರ ಕಂಚಿನ ಪದಕ ಗೆದ್ದುಕೊಂಡರು.

25 ವರ್ಷದ ಬಿಂದ್ಯಾರಾಣಿ ಒಟ್ಟು 196 ಕೆ.ಜಿ (83+113 ಕೆ.ಜಿ) ಭಾರ ಎತ್ತಿದರು. ಈ ತೂಕ ವಿಭಾಗದ ಒಲಿಂಪಿಕ್ಸ್‌ನಲ್ಲಿ ಇರುವುದಿಲ್ಲ. ಆದರೆ ಇದು ಮಣಿಪುರದ ಸ್ಪರ್ಧಿಯ ಉತ್ತಮ ಸಾಧನೆಯೇನಲ್ಲ. 2022ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 203 ಕೆ.ಜಿ ಎತ್ತಿದ್ದರು.

ಉತ್ತರ ಕೊರಿಯಾದ ಕಾಂಗ್‌ ಗ್ಯಾಂಗ್‌ 234 ಕೆ.ಜಿ (103+131) ಭಾರ ಎತ್ತಿ ಚಿನ್ನ ಗೆದ್ದರು. ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ರುಮೇನಿಯಾದ ಕ್ಯಾಂಬಿ ಮಿಹೇಲ ವೆಲಂಟಿನಾ ಒಟ್ಟು 201 ಕೆ.ಜಿ. ಭಾರ ಎತ್ತಿ ಬೆಳ್ಳಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT